ಒಮರ್‌ನ ಹಿಡಿಯಲು ಸುಳಿವು ಕೊಟ್ಟವರಿಗೆ 10 ಮಿ. ಡಾಲರ್
ವಾಷಿಂಗ್ಟನ್ : ತೋರಾಬೋರಾದ ಬೆಟ್ಟ ಗುಹೆಗಳ ಮೇಲೆ ನಿರಂತರ ಬಾಂಬ್‌ದಾಳಿ ನಡೆಯುತ್ತಿದ್ದರೂ, ಲಾಡೆನ್ ಇರಲಿ ಒಮರ್‌ನ ಸುಳಿವನ್ನೂ ಕಾಣದೆ ಕಂಗೆಟ್ಟಿರುವ ಅಮೆರಿಕ ತನ್ನ ಶತ್ರು ನಾಯಕರ ಬಂಧನಕ್ಕೆ ಹೊಸ ತಂತ್ರ ಹೂಡಿದೆ. ಪತನಗೊಂಡ ತಾಲಿಬಾನ್ ಆಡಳಿತದ ಮುಖ್ಯಸ್ಥ ಮುಲ್ಲಾ ಮೊಹ್ಮದ್ ಒಮರ್‌ನ ಹಿಡಿಯಲು ಸುಳಿವು ಕೊಟ್ಟವರಿಗೆ 10 ಮಿಲಿಯನ್ ಡಾಲರ್‌ಗಳ ಬಹುಮಾನ ನೀಡುವುದಾಗಿ ಅಮೆರಿಕಾ ಪ್ರಕಟಿಸಿದೆ.
10 ದಿನಗಳ ಹಿಂದೆ ತಾಲಿಬಾನ್ ಆಡಳಿತ ಪತನಗೊಂಡ ನಂತರ ಕಂದಹಾರ್‌ನಿಂದ ಒಮರ್ ಕಣ್ಮರೆಯಾಗಿದ್ದಾನೆ. ಒಮರ್‌ನನ್ನು ಅತಿ ಶೀಘ್ರದಲ್ಲಿ ಬಂಧಿಸಲು ಅಮೆರಿಕಾ ಉದ್ದೇಶಿಸಿದೆ. ಆತನನ್ನು ಹಿಡಿಯಲು ಸುಳಿವು ನೀಡುವವರಿಗೆ ಬಹುಮಾನ ನೀಡಲಾಗುವುದು ಎಂದು ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಡೊನಾಲ್ಡ್ ರುಮ್ಸ್‌ಫೆಲ್ಡ್ ತಿಳಿಸಿದ್ದಾರೆ.
ಅಮೆರಿಕಾದ ಬಾಂಬ್‌ವೃಷ್ಟಿಗೆ ಬೆಚ್ಚದೆ ತನ್ನ ಹೆಜ್ಜೆ ಜಾಡುಗಳನ್ನು ಗೋಪ್ಯವಾಗಿರಿಸಿಕೊಂಡಿರುವ ಅಂತರರಾಷ್ಟ್ರೀಯ ಪಾತಕಿ ಒಸಾಮ ಬಿನ್ ಲ್ಯಾಡೆನ್‌ನ ಪತ್ತೆಗೂ ಅಮೆರಿಕಾ 25 ಮಿಲಿಯನ್ ಡಾಲರ್‌ಗಳ ಭಾರೀ ಮೊತ್ತದ ಬಹುಮಾನ ಘೋಷಿಸಿದೆ.
(ಪಿಟಿಐ)
ಮುಖಪುಟ / ‘ಆಪರೇಷನ್ ಎಂಡ್ಯೂರಿಂಗ್ ಫ್ರೀಡಂ’












Click it and Unblock the Notifications