ಶತಮಾನದ ಸದನ ಜಯಲಕ್ಷ್ಮಿ ವಿಲಾಸಕ್ಕೆ ಎಂದು ನಿಮ್ಮ ಪ್ರವಾಸ ?

ಮೈಸೂರು : ಶತಮಾನದಷ್ಟು ಹಳೆಯದಾದ ಜಯಲಕ್ಷ್ಮಿ ವಿಲಾಸ ಸದನ ವರ್ಷಗಳ ಹಿಂದೆ ಇನ್ನೇನು ಮಾಡು ಕುಸಿದು, ಪಾಳು ಬಿದ್ದುಹೋಗುತ್ತದೆಂಬ ಭಯ ಹುಟ್ಟಿಸಿತ್ತು. ಆದರೀಗ ಅದು ಸುಣ್ಣ ಬಣ್ಣ ಕಂಡಿದೆ. ಇದಕ್ಕೆ ಧನ ಸಹಾಯ ಮಾಡಿದ ಇನ್ಫೋಸಿಸ್‌ ಪ್ರತಿಷ್ಠಾನದ ಸುಧಾ ಮೂರ್ತಿ ಅವರಿಗೆ ಧನ್ಯವಾದಗಳು.

ಮೈಸೂರು ಸ್ನಾತಕೋತ್ತರ ಪದವಿ ವಿಶ್ವವಿದ್ಯಾಲಯ ‘ಮಾನಸ ಗಂಗೋತ್ರಿ’ ಆವರಣದಲ್ಲಿ ಶತಮಾನದ ಹಿಂದೆ ಕೇವಲ 7 ಲಕ್ಷ ರುಪಾಯಿ ವೆಚ್ಚದಲ್ಲಿ ತಲೆಯೆತ್ತಿದ್ದ ಈ ಭವ್ಯ ಕಟ್ಟಡದಲ್ಲಿ ಮೈಸೂರಿನ ಪ್ರತಿಷ್ಠಿತ ಕುಟುಂಬವೊಂದು ವಾಸವಿತ್ತು. ಎಸಿಸಿ ಸಿಮೆಂಟ್‌ ಪ್ರಾಚ್ಯವಸ್ತು ಸಂರಕ್ಷಣಾ ಘಟಕ ಒಂದೂವರೆ ವರ್ಷದ ಹಿಂದೆ ಈ ಕಟ್ಟಡದ ನವೀಕರಣ ಕಾರ್ಯವನ್ನು ಕೈಗೆತ್ತಿಕೊಂಡಿತು. ಈ ಘಟಕ ದೇಶಾದ್ಯಂತ ಇಂಥಾ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಇನ್ಫೋಸಿಸ್‌ ಪ್ರತಿಷ್ಠಾನ ನೆರವಿಗೆ ಬಂತು. ನವೀಕರಣಕ್ಕೆ ಆದ ಖರ್ಚು 1 ಕೋಟಿ 17 ಲಕ್ಷ ರುಪಾಯಿ !

ಈ ಪರಂಪರೆಯ ದ್ಯೋತಕ ಸದನದ ಬಾಗಿಲು ಇನ್ನು ಮುಂದೆ ಸಾರ್ವಜನಿಕರಿಗೆ ತೆರಕೊಳ್ಳಲಿದೆ. ಡಿಸೆಂಬರ್‌ 18ರಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ವಿಧ್ಯುಕ್ತವಾಗಿ ನವೀಕೃತ ಸದನವನ್ನು ಉದ್ಘಾಟಿಸುವರು. ಅಂದಹಾಗೆ, ಇಂಥದೇ ಸದನವನ್ನು ಈಗ ಕಟ್ಟಬೇಕಾದರೆ ತಗಲುವ ಅಂದಾಜು ವೆಚ್ಚ ಕೇವಲ 70 ಕೋಟಿ ರುಪಾಯಿಯಂತೆ !

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+