ಸಂಸತ್ ಭವನದ ಆವರಣದಲ್ಲಿ ನೂರಾರು ಸುತ್ತಿನ ಫೈರಿಂಗ್!
ನವದೆಹಲಿ : ಸಂಸತ್ತಿನ ಒಳ ಆವರಣದಲ್ಲಿ ಕೆಲವು ಸುತ್ತು ಗುಂಡು ವಿನಿಮಯ ನಡೆದಿದೆ, ಫೈರಿಂಗ್‌ಗೆ ಕಾರಣ ತಿಳಿದುಬಂದಿಲ್ಲ.
ಪಾರ್ಲಿಮೆಂಟ್‌ನ ಪ್ರಮುಖ ಬಾಗಿಲುಗಳಲ್ಲಿ ಒಂದಾದ ವಿಜಯ್ ಚೌಕ್ ಬಳಿ ನೂರಾರು ಸುತ್ತಿನ ಗುಂಡಿನ ಸಿಡಿತ ನಡೆದಿದೆ. ಫೈರಿಂಗ್ ಘಟನೆ ಪ್ರಾರಂಭವಾದ ಕೆಲವೇ ಸಮಯದಲ್ಲಿ ಭದ್ರತಾ ಪಡೆಗಳು ಸಂಸತ್ ಭವನದ ಎಲ್ಲ ಬಾಗಿಲುಗಳನ್ನು ಮುಚ್ಚಿವೆ. 11.45 ರ ಸುಮಾರಿಗೆ ಪ್ರಾರಂಭವಾದ ಫೈರಿಂಗ್ ನಂತರ, ಎರಡು ಭಾರೀ ಸ್ಫೋಟದ ಸದ್ದುಗಳು ಕೂಡ ಕೇಳಿಸಿದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಫೈರಿಂಗ್ ಇನ್ನೂ ಮುಂದುವರಿದಿದ್ದು , ಹೆಚ್ಚಿನ ಭದ್ರತಾ ಪಡೆಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಇತ್ತೀಚಿನ ಸುದ್ದಿಗಳಿಗೆ ನಮ್ಮ ಟಿಕ್ಕರ್ ಗಮನಿಸಿ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications