ಎಚ್.ಡಿ.ದೇವೇಗೌಡರಿಗೆ ಏಡ್ಸ್ ಇಂಜೆಕ್ಷನ್ ಚುಚ್ಚುವುದಾಗಿ ಬೆದರಿಕೆ
ಕೊರಟಗೆರೆ : ಮಾಜಿ ಪ್ರಧಾನಿ ಹಾಗೂ ಜಾತ್ಯತೀತ ಜನತಾದಳದ ನಾಯಕ ಎಚ್.ಡಿ. ದೇವೇಗೌಡ ಅವರಿಗೆ ಬಂದಿರುವ ಹೊಸ ಬೆದರಿಕೆ ಪತ್ರವಿದು. ಕೊಲ್ಲುತ್ತೇನೆಂದಾಗಲೀ, ಆ್ಯಸಿಡ್ ಎರಚುತ್ತೇನೆಂದಾಗಲೀ ಪತ್ರ ಬರೆದಿರುವಾತ ಬೆದರಿಸಿಲ್ಲ . ಬದಲಾಗಿ ಏಡ್ಸ್ ರೋಗಾಣು ಹೊಂದಿರುವ ಚುಚ್ಚುಮದ್ದು ಚುಚ್ಚುವುದಾಗಿ ಅನಾಮಿಕ ತನ್ನ ಪತ್ರದಲ್ಲಿ ಗೌಡರನ್ನು ಬೆದರಿಸಿದ್ದಾನೆ.
ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಏಡ್ಸ್ ರೋಗಾಣುವಿನ ಚುಚ್ಚುಮದ್ದು ಚುಚ್ಚುವುದಾಗಿ ಪತ್ರದಲ್ಲಿ ತಿಳಿಸಲಾಗಿದೆ. ಈ ಕಾರಣದಿಂದಾಗಿಯೇ ಗೌಡರಿಗೆ ಒದಗಿಸಿರುವ ಭದ್ರತೆ ಮತ್ತಷ್ಟು ಬಿಗಿಯಾಗಿದೆಯಂತೆ! ಅಂದಹಾಗೆ, ಗೌಡರಿಗೆ ಏಡ್ಸ್ ಬೆದರಿಕೆ ಬಂದಿರುವ ವಿಷಯವನ್ನು ಬಹಿರಂಗಪಡಿಸಿದ್ದು - ಮಾಜಿ ಶಾಸಕ ಜಿ.ಎಸ್. ಶಿವನಂಜಪ್ಪ .
ಕೊರಟಗೆರೆ ತಾಲ್ಲೂಕು ಸಿದ್ಧರಬೆಟ್ಟದಲ್ಲಿ ಇತ್ತೀಚೆಗೆ ಜರುಗಿದ ಜಾತ್ಯತೀತ ಜನತಾದಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ಶಿವನಂಜಪ್ಪ , ಮಾಜಿ ಪ್ರಧಾನಿಗಳಿಗೆ ಎದುರಾಗಿರುವ ಹೊಸ ಬೆದರಿಕೆಯ ಬಗ್ಗೆ ತಿಳಿಸಿದರು.(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications