ಆನ್‌ಲೈನ್ ಲಾಟರಿ: ಮೋದಿ ಗ್ರೂಪ್‌ನಿಂದ ಹೊಸ ಸಂಸ್ಥೆ ಸ್ಥಾಪನೆ
ಬೆಂಗಳೂರು : ರಾಷ್ಟ್ರಮಟ್ಟದಲ್ಲಿ ಆನ್‌ಲೈನ್ ಲಾಟರಿ ಉತ್ತೇಜಿಸಲು ಕೆ.ಕೆ. ಮೋದಿ ಗ್ರೂಪ್ ಎಂ.ಡಬ್ಲ್ಯೂಸಿ ಎಂಬ ಮಾರ್ಕೆಟ್ ಸರ್ವೀಸಸ್ ಸಂಸ್ಥೆ ಆರಂಭಿಸಿದೆ. ಈ ಹೊಸ ಸಂಸ್ಥೆ 2002ರ ಮೇ 1ರಿಂದ ಕಾರ್ಯಾರಂಭ ಮಾಡಲಿದೆ. ಈ ವಿಷಯವನ್ನು ಮೋದಿ ಎಂಟರ್‌ಪ್ರೆೃಸಸ್‌ನ ಅಧ್ಯಕ್ಷ ಲಲಿತ್ ಕೆ. ಮೋದಿ ತಿಳಿಸಿದ್ದಾರೆ.
ಮೇ 1ರಿಂದ ದೇಶಾದ್ಯಂತ ಕಾರ್ಯಾರಂಭ ಮಾಡುವ ಸಂಸ್ಥೆ ದೇಶದ 166 ನಗರಗಳ ನಾನಾ ಭಾಗಗಳಲ್ಲಿ 8600 ಆನ್‌ಲೈನ್ ಲಾಟರಿ ರೀಟೈಲ್ ಟರ್ಮಿನಲ್‌ಗಳನ್ನು ಸ್ಥಾಪಿಸಲಿದೆ. ಈ ಟರ್ಮಿನಲ್ ಜಾಲದ ಮೂಲಕ ಆನ್‌ಲೈನ್ ಲಾಟರಿ ವ್ಯವಹಾರ ನಡೆಯಲಿದೆ.
ಈ ಕಾಯಕಕ್ಕೆ ಮೋದಿ ಗ್ರೂಪ್ ಇಂಟಿಗ್ರೇಟೆಡ್ ಟೆಕ್ನಾಲಜಿ ಸಲ್ಯೂಷನ್ಸ್ ಅನ್ನು ತನ್ನ ವಿತರಕನನ್ನಾಗಿ ನೇಮಕ ಮಾಡಿಕೊಂಡಿದೆ. ಆನ್‌ಲೈನ್ ಲಾಟರಿ ಅದೃಷ್ಟದೊಂದಿಗೆ ಆಟವಾಡುವ ವಿನೋದದ ವ್ಯವಹಾರ. ಆದರೂ ಲಾಟರಿಯ ಬಗ್ಗೆ ಜನಸಾಮಾನ್ಯರಿಗೆ ವಿಶ್ವಾಸವಿರಬೇಕು.
ಈ ಹೊತ್ತು ಜನರಲ್ಲಿ ಹಲವು ಅನುಮಾನಗಳಿವೆ, ನಿರಾಸಕ್ತಿಯೂ ಇದೆ. ಇದನ್ನು ಹೋಗಲಾಡಿಸಿ, ಭಾರತದಲ್ಲಿ ಲಾಟರಿಯ ಬಗ್ಗೆ ಹೊಸವ್ಯಾಖ್ಯಾನ ಮಾಡುವುದು ಸಂಸ್ಥೆಯ ಉದ್ದೇಶವಾಗಿದೆ. ಅಲ್ಲದೆ ಲಾಟರಿಯಲ್ಲಿ ಕ್ರೀಡಾ ಮನೆಭಾವ ಬೆಳಸಲೂ ಸಂಸ್ಥೆ ಶ್ರಮಿಸುತ್ತದೆ ಎಂದು ಅವರು ಹೇಳಿದ್ದಾರೆ.
ಆನ್‌ಲೈನ್ ಲಾಟರಿಗೆ ವಿಶ್ವಾಸಾರ್ಹತೆಯ ಜೊತೆಜೊತೆಗೇ ಪಾರದರ್ಶಕತೆ, ಸಮಗ್ರತೆ ತಂದುಕೊಡಲೂ ಸಂಸ್ಥೆ ಶ್ರಮಿಸುತ್ತದೆ ಎಂದು ಲಲಿತ್ ಕೆ ಮೋದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications