ಅಂತರ್ಜಾಲದಲ್ಲಿ ಮಲ್ಲೇಶ್ವರಂನ ಕೇಂದ್ರೀಯ ವಿದ್ಯಾಲಯ
ಬೆಂಗಳೂರು : ಪೋಷಕರಿಗೆ ಶಾಲೆಯ ಬಗ್ಗೆ ಸಮಗ್ರ ಮಾಹಿತಿ ನೀಡುವ ಸಲುವಾಗಿ ದೇಶದಲ್ಲಿ ಪ್ರಥಮ ಬಾರಿಗೆ ಮಲ್ಲೇಶ್ವರಂ ಕೇಂದ್ರೀಯ ವಿದ್ಯಾಲಯ ತನ್ನ ವೆಬ್‌ಸೈಟನ್ನು ಆರಂಭಿಸಿದೆ.
www.kvmb.orgವೆಬ್‌ಸೈಟ್‌ನಲ್ಲಿ ಶಾಲೆಗೆ ಪ್ರವೇಶ ಪಡೆಯುವಾಗ ಪಾಲಿಸಬೇಕಾದ ನಿಯಮಗಳು, ವಿದ್ಯಾಸಂಸ್ಥೆಯ ಸಾಧನೆಗಳು, ಅಲ್ಲದೆ ಶಾಲೆಯಲ್ಲಿ ಏನೇನು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂಬೆಲ್ಲ ಮಾಹಿತಿಗಳನ್ನು ಅಳವಡಿಸಲಾಗಿದೆ.
ಶಾಲೆಯಲ್ಲಿ ಪ್ರವೇಶ ಪಡೆಯುವ ಸಲುವಾಗಿ ಪೋಷಕರು ಇನ್ನು ಮುಂದೆ ಮಲ್ಲೇಶ್ವರಂವರೆಗೆ ಹೋಗಿ ಮಾಹಿತಿಗಾಗಿ ಪರದಾಡಬೇಕಾಗಿಲ್ಲ. ಈ-ಮೇಯ್ಲ್ ಮೂಲಕ ಶಾಲೆಯ ಬಗೆಗಿನ ಎಲ್ಲ ವಿವರಗಳನ್ನು ತಿಳಿದುಕೊಳ್ಳಬಹುದು. ವೆಬ್‌ಸೈಟಿನಲ್ಲಿ ಮಾಹಿತಿ ತಂತ್ರಜ್ಞಾನ ಶಿಕ್ಷಣದ ಕುರಿತೂ ವಿವರಿಸಲಾಗಿದ್ದು, ಮಕ್ಕಳಿಗೋಸ್ಕರ ಸದ್ಯದಲ್ಲಿಯೇ ಗೇಮ್ಸ್‌ನ್ನು ಅಳವಡಿಸಲಾಗುವುದು ಎಂದು ಶಾಲೆಯ ಪ್ರಕಟಣೆ ಸೋಮವಾರ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications