ಕಾಂಗ್ರೆಸ್ಸನ್ನು ಹಿಂದಿಕ್ಕಿದ ಬಿಜೆಪಿ ಪಾಲಿಗೆ ಉಡುಪಿ ಮುನ್ಸಿಪಾಲಿಟಿ
ಮಣಿಪಾಲ : ಉಡುಪಿ ಮುನ್ಸಿಪಾಲಿಟಿ ಕೌನ್ಸಿಲ್ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಸ್ಪಷ್ಟ ಮುನ್ನಡೆ ಸಾಧಿಸುವುದರೊಂದಿಗೆ ಭಾರತೀಯ ಜನತಾ ಪಕ್ಷ ಕರಾವಳಿಯಲ್ಲಿ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.
ಭಾನುವಾರ(ಡಿ.09) ಚುನಾವಣೆಯಲ್ಲಿ ಬಹುಮತವನ್ನು ಸಾಧಿಸಿರುವ ಬಿಜೆಪಿ, ಮುನ್ಸಿಪಾಲಿಟಿ ಅಧಿಕಾರವನ್ನು ಗಳಿಸಿದೆ. ಉಡುಪಿ ಪಟ್ಟಣ ಮುನಿಸಿಪಾಲಿಟಿ ಚುನಾವಣೆಯಲ್ಲಿ ಪಕ್ಷಗಳ ಬಲಾಬಲ ಇಂತಿದೆ :
ಭಾರತೀಯ ಜನತಾಪಕ್ಷ : 21
ಕಾಂಗ್ರೆಸ್ : 12
ಪಕ್ಷೇತರರು : 02
ಇತ್ತೀಚೆಗೆ ಜರುಗಿದ ಪುರಸಭೆ ಚುನಾವಣೆಗಳಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ಕಾಂಗ್ರೆಸ್ ಪಾಲಾಗಿತ್ತು . ಕಾಂಗ್ರೆಸ್‌ನ ವಿಜಯದಿಂದಾಗಿ, ಕರಾವಳಿಯಲ್ಲಿ ಬಿಜೆಪಿಯ ಅಧಿಪತ್ಯಕ್ಕೆ ಪೆಟ್ಟು ಬಿದ್ದಿತ್ತು . ಆದರೆ, ಉಡುಪಿ ಮುನ್ಸಿಪಾಲಿಟಿ ಚುನಾವಣೆ ಮೂಲಕ ಬಿಜೆಪಿ ಮತ್ತೆ ಎದ್ದು ನಿಂತಿದೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications