ಡಿ.25 ರಂದು ಮತ್ತೆ ಕ್ರಿಕೆಟ್ ಆಡುವಅಮೀರ್‌ನ ಲಗಾನ್ ತಂಡ
ಮುಂಬಯಿ : ಪರಿನ್ ಹರಿಯ ಎನ್ನುವ ಈ 17 ರ ಮುಂಬಯಿ ಹುಡುಗನ ಕನಸು ಮನಸಿನ ತುಂಬ ಡಿಸೆಂಬರ್ 25 ತುಂಬಿದೆ. ಅಂದು, ಬಾಲಿವುಡ್‌ನ ಜನಪ್ರಿಯ ನಟ ಅಮೀರ್‌ಖಾನ್ ನೇತೃತ್ವದ ಬ್ರಿಟಾನಿಯ ಲಗಾನ್ ತಂಡದೊಂದಿಗೆ ಪರಿನ್ ಕ್ರಿಕೆಟ್ ಆಡಲಿದ್ದಾನೆ. ಅಂದಹಾಗೆ, ಪರಿನ್‌ಗೆ ಕ್ರಿಕೆಟ್ ಕುರಿತು ಅಷ್ಟೇನೂ ಒಲವಿಲ್ಲ . ಚೆಸ್ಸೆಂದರೆ ಆತನಿಗೆ ಜೀವ. ಇನ್ನೊಂದು ಜೀವ ಅಮೀರ್‌ಖಾನ್!
ಎಂಎಂಕೆ ಕಾಲೇಜಿನಲ್ಲಿ ಪರಿನ್ ಎರಡನೇ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿ. ಮಹಿಂನಲ್ಲಿ ಆತನ ಕುಟುಂಬದ ವಾಸ. ಸಿನಿಮಾ ಹಾಗೂ ಸಂಗೀತ ಆತನಿಗೆ ಮೆಚ್ಚು . ಎಂಬಿಎ ಮಾಡುವ ಕನಸು ಮನಸಲ್ಲಿ ಗೂಡು ಕಟ್ಟಿದೆ. ಕ್ರೀಡಾಪಟು ಆಗಬೇಕೆಂದು ಪರಿನ್ ಯಾವತ್ತೂ ಅಂದುಕೊಂಡಿಲ್ಲ.
ಲಗಾನ್ ತಂಡದ ಜೊತೆ ಕ್ರಿಕೆಟ್ ಆಡಲು ಆಯ್ಕೆಯಾದಾಗಿನಿಂದ ಪರಿನ್ ಡಿಸೆಂಬರ್ 25 ರ ಜಪದಲ್ಲಿದ್ದಾನೆ. ಆತನೊಂದಿಗೆ ಹೈದರಾಬಾದ್‌ನ ಶ್ರೀಪಾದ್ ಪುರಾಣಿಕ್, ಬಿಹಾರದ ರಾಜೇಶ್‌ಕುಮಾರ್ ಅಗರ್‌ವಾಲ್ ಮತ್ತು ಜೈಪುರ ಹಾಗೂ ಅಮೃತಸರದ ಯುವಕರೂ ಲಗಾನ್ ತಂಡದ ಜೊತೆ ಕ್ರಿಕೆಟ್ ಆಡಲಿಕ್ಕೆ ಆಯ್ಕೆಯಾಗಿದ್ದಾರೆ.
ಡಿಸೆಂಬರ್ 25 ರಂದು ಮುಂಬಯಿಯ ಕ್ರೀಡಾಂಗಣದಲ್ಲಿ ನಡೆಯುವ ಈ ಕ್ರಿಕೆಟ್ ಪಂದ್ಯ ನೋಡಲು ಟಿಕೆಟ್ ಕೊಳ್ಳಬೇಕು. ಟಿಕೆಟ್ ದರ ಮಾಮೂಲು ಕ್ರಿಕೆಟ್ ಪಂದ್ಯಕ್ಕಿಂತ ತುಸು ಅಗ್ಗ . ಬ್ರಿಟಾನಿಯಾ ಸಂಸ್ಥೆ ಈ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿದೆ. ತನ್ನ ಉತ್ಪನ್ನ ಬ್ರಿಟಾನಿಯಾ ಬಿಸ್ಕೆಟ್‌ಗಳನ್ನು ಜನಪ್ರಿಯಗೊಳಿಸುವುದು ಸಂಸ್ಥೆಯ ಉದ್ದೇಶ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications