ಜಂಗಾಲಪಲ್ಲಿ ಗ್ರಾಮದಲ್ಲಿ ಕರಳುಬೇನೆ : ಇಬ್ಬರ ಸಾವು
ಬಾಗೇಪಲ್ಲಿ : ತಾಲ್ಲೂಕಿನ ಜಂಗಾಲಪಲ್ಲಿ ಗ್ರಾಮದಲ್ಲಿ ಕರಳುಬೇನೆ ವ್ಯಾಪಕವಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳ ವರದಿಯ ಪ್ರಕಾರ ಕಲುಷಿತ ನೀರು ಮತ್ತು ಮಾಲಿನ್ಯದ ಕಾರಣ ಜಂಗಾಲಪಲ್ಲಿ ಗ್ರಾಮದ 30ಕ್ಕೂ ಹೆಚ್ಚು ಜನರು ಕರಳು ಬೇನೆಗೆ ತುತ್ತಾಗಿದ್ದಾರೆ.
ನಂಜಮ್ಮ (50) ಮತ್ತು ಬೊಕ್ಕ ನಂಜಪ್ಪ (60) ಎಂಬುವರೇ ಈ ರೋಗದಿಂದ ಮೃತಪಟ್ಟಿರುವ ದುರ್ದೈವಿಗಳು. ಈ ವಿಷಯವನ್ನು ಕೋಲಾರ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಆರೋಗ್ಯ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications