ಡಿ.9ರಿಂದ 5 ಮಾರ್ಗಗಳಲ್ಲಿ ಬಿಎಂಟಿಸಿಯ ರಾತ್ರಿ ಬಸ್ ಸಂಚಾರ
ಬೆಂಗಳೂರು : ರಾತ್ರಿ 11 ದಾಟಿದೆ, ಮನೆಗೆ ಹೋಗಲು ಆಟೋದವರು ಡಬಲ್ ಮೀಟರ್ ಕೇಳ್ತಾರೆ. ದೂರದ ಕೆಂಗೇರಿ, ಕೆ.ಆರ್. ಪುರಂ ಇಲ್ಲವೇ ಯಲಹಂಕಕ್ಕೆ ಹೋಗಲು ಕನಿಷ್ಠ 200 ರುಪಾಯಿ ಕೊಡಬೇಕು ಎಂದು ನೀವು ಚಿಂತಿಸುವ ಅಗತ್ಯ ಇಲ್ಲ. ಬಿ.ಎಂ.ಟಿ.ಸಿ. ಡಿಸೆಂಬರ್ 9ರಿಂದ ಇಲ್ಲಿಗೂ ರಾತ್ರಿ ಬಸ್ ಸಂಚಾರ ವಿಸ್ತರಿಸಿದೆ.
ರಾತ್ರಿಯವೇಳೆ ರೈಲು ಹಾಗೂ ಬಸ್‌ನಲ್ಲಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಈಗಿರುವ 20 ರಾತ್ರಿ ಸೇವೆಯ ಬಸ್‌ಗಳ ಜೊತೆಗೆ ಮತ್ತೆೈದು ಬಸ್ ಸೌಲಭ್ಯ ಒದಗಿಸಿದೆ. ಈ ಹೊಸ ಬಸ್‌ಗಳು ಭಾನುವಾರ ರಾತ್ರಿಯಿಂದಲೇ ಕಾರ್ಯಾರಂಭ ಮಾಡಲಿವೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) 402-ಡಿ ಮಾರ್ಗ ಸಂಖ್ಯೆಯ ಬಸ್ ಹೆಬ್ಬಾಳ - ಯಲಹಂಕ ಉಪನಗರದ 4ನೇ ಘಟ್ಟಕ್ಕೆ ಸಂಚರಿಸಲಿದೆ. ಅಂತೆಯೇ 315 ಸಂಖ್ಯೆ ಬಸ್ ಅಲಸೂರು, ರಾಮಮೂರ್ತಿ ನಗರ ಮಾರ್ಗವಾಗಿ ಕೃಷ್ಣರಾಜ ಪುರಂ ತಲುಪಲಿದೆ.
333 ಮಾರ್ಗಸಂಖ್ಯೆಯ ಬಸ್ ಅಲಸೂರು, ಎಚ್.ಎ.ಎಲ್. ಮಾರ್ಗವಾಗಿ ಮಾರತ್ ಹಳ್ಳಿಗೂ, 222-ಎ ಮಾರ್ಗಸಂಖ್ಯೆಯ ಬಸ್ ಮೈಸೂರು ರಸ್ತೆ, ಕೆಂಗೇರಿ ಮಾರ್ಗವಾಗಿ ಕೆಂಗೇರಿ ಉಪನಗರಕ್ಕೂ ಸಂಚರಿಸಲಿದೆ. 215-ಬಿ ಮಾರ್ಗಸಂಖ್ಯೆಯ ಬಸ್ ಕೃಷ್ಣರಾಜ ಮಾರುಕಟ್ಟೆ, ಬನಶಂಕರಿ 1ನೇ ಘಟ್ಟದ ಮಾರ್ಗವಾಗಿ ಆವಲಹಳ್ಳಿ ಬಿಡಿಎ ಪಾಕ್ ಹಾಗೂ ಕೆಂಪೇಗೌಡ ಬಸ್ ನಿಲ್ದಾಣ ನಡುವೆ ಸಂಚರಿಸಲಿದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications