Get Updates
Get notified of breaking news, exclusive insights, and must-see stories!

ವೋಕಾರ್ಟ್‌ನಿಂದ ಹೃದಯ ಶುಶ್ರೂಷೆ ಡಿಪ್ಲೋಮಾ ಕೋರ್ಸ್‌

ಬೆಂಗಳೂರು : ವೋಕಾರ್ಟ್‌ ಹಾಸ್ಟಿಟಲ್‌ ಮತ್ತು ಹಾರ್ಟ್‌ ಇನ್ಸ್‌ಸ್ಟಿಟ್ಯೂಟ್‌ ಹೃದಯ ಹಾಗೂ ಎದೆ ಗೂಡಿನ ಶುಶ್ರೂಷೆಗೆ ಸಂಬಂಧಿಸಿದಂತೆ ಆರಂಭಿಸಿರುವ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್‌ಗೆ ಕರ್ನಾಟಕ ಕೌನ್ಸಿಲ್‌ ಮಾನ್ಯತೆ ನೀಡಿದೆ.

ಈ ರೀತಿಯ ಕೋರ್ಸ್‌ ಭಾರತದಲ್ಲಿ ಕೇವಲ ಕೆಲವೇ ಕೆಲವು ಆಯ್ದ ಆಸ್ಪತ್ರೆಗಳಲ್ಲಿ ಮಾತ್ರ ಇದೆ. ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್‌ ನಡೆಸಲು ಮಾನ್ಯತೆ ಪಡೆದ ರಾಜ್ಯದ ಪ್ರಥಮ ಆಸ್ಪತ್ರೆ ಇದಾಗಿದೆ. ಈ ವೈದ್ಯಕೀಯ ಕೋರ್ಸ್‌ಗೆ ಅಖಿಲ ಭಾರತ ಮಟ್ಟದಲ್ಲಿ ನಡೆಸಲಾಗುವ ಪರೀಕ್ಷೆಯ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು.

ಡಿಪ್ಲೋಮಾ ಕೋರ್ಸ್‌ಗೆ ಕನಿಷ್ಠ ವಿದ್ಯಾರ್ಹತೆ ಬಿಎಸ್‌ಸಿ ಅಥವಾ ಎರಡು ವರ್ಷದ ಜಿಎನ್‌ಎಂ. ಪ್ರವೇಶ ಪರೀಕ್ಷೆಯು ಡಿಸೆಂಬರ್‌ನಲ್ಲಿಯೇ ನಡೆಯಲಿದ್ದು, ಹೆಚ್ಚಿನ ವಿವರಗಳನ್ನು ದೂರವಾಣಿ ಸಂಖ್ಯೆ 080- 2261037 ಅಥವಾ 2281145ರಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+