ಆತ್ಮರಕ್ಷಣಾ ಕಲೆಗಳ ಕಲಿಯಲು ಮಹಿಳೆಯರಿಗೆ ಸಾಂಗ್ಲಿಯಾನ ಕರೆ
ಬೆಂಗಳೂರು: ಮಹಿಳೆಯರು ಹೆಚ್ಚು ಹೆಚ್ಚು ಆತ್ಮ ರಕ್ಷಣಾ ಕಲೆಗಳನ್ನು ರೂಢಿಸಿಕೊಳ್ಳಬೇಕು. ಪುಂಡರ ಪುಂಡಾಟಗಳಿಗೆ ತಕ್ಕ ಉತ್ತರ ಕೊಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ನಗರ ಪೊಲೀಸ್ ಕಮೀಷನರ್ ಎಚ್.ಟಿ. ಸಾಂಗ್ಲಿಯಾನ ಮಹಿಳೆಯರಿಗೆ ಕರೆ ನೀಡಿದ್ದಾರೆ.
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಕಾನೂನು ವಿಷಯವಾಗಿ ಶನಿವಾರ ಬೆಂಗಳೂರಿನಲ್ಲಿ ಜರುಗಿದ ವಿಚಾರ ಸಂಕಿರಣದಲ್ಲಿ ಸಾಂಗ್ಲಿಯಾನ ಮಾತಾಡುತ್ತಿದ್ದರು. ಲೈಂಗಿಕ ದೌರ್ಜನ್ಯ ನಡೆದಾಗ ಅಥವಾ ಶೋಷಣೆಗೊಳಗಾದಾಗ ತಕ್ಷಣವೇ ಪೊಲೀಸರಿಗೆ ದೂರು ನೀಡುವಂತೆ ಅವರು ಮನವಿ ಮಾಡಿದರು.
ಕಳ್ಳರ ಗಮನ ಸೆಳೆಯುವಂತೆ ಚಿನ್ನಾಭರಣಗಳನ್ನು ಧರಿಸದಿರುವಂತೆ ಸಾಂಗ್ಲಿಯಾನ ಮಹಿಳೆಯರಿಗೆ ಕಿವಿಮಾತು ಹೇಳಿದರು. ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತರಾಗಿ ನೇಮಕವಾದ ಸಂದರ್ಭದಲ್ಲಿ - ‘ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸುವುದು ತಮ್ಮ ಆದ್ಯತೆಯಲ್ಲ ’ ಎನ್ನುವ ಹೇಳಿಕೆ ನೀಡಿದ್ದ ಸಾಂಗ್ಲಿಯಾನ ಮಹಿಳೆಯರ ಆಕ್ರೋಶಕ್ಕೆ ತುತ್ತಾಗಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications