ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋನ್‌ ಬಿಲ್‌ ಪಾವತಿಗೆ ಅಂಚೆ ಕಚೇರಿಯಲ್ಲಿ ಇ-ಬಿಲ್‌ ಸೌಲಭ್ಯ!

By Staff
|
Google Oneindia Kannada News

ನವದೆಹಲಿ : ಟೆಲಿಫೋನ್‌ ಬಿಲ್‌ ಪಾವತಿಸಲು ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಅಂಚೆಕಚೇರಿಗಳಲ್ಲಿ ಈ-ಬಿಲ್‌ ಪೋಸ್ಟ್‌ ಸೌಲಭ್ಯವನ್ನು ಒದಗಿಸಲು ಕೇಂದ್ರ ಸಂಪರ್ಕ ಖಾತೆ ನಿರ್ಧರಿಸಿದೆ.

ದೇಶದಲ್ಲಿಯೇ ಮೊತ್ತ ಮೊದಲ ಬಾರಿಗೆ ಅನುಷ್ಠಾನಗೊಳಿಸುತ್ತಿರುವ ಈ- ಬಿಲ್‌ ಸೌಲಭ್ಯ ಪ್ರಾಯೋಗಿಕವಾಗಿ ಬೆಂಗಳೂರು, ಕೊಲ್ಕತಾ ನಗರಗಳಲ್ಲಿ ಆರಂಭವಾಗಲಿದೆ. ಈ ಎರಡು ನಗರಗಳಲ್ಲಿ ಈ- ಬಿಲ್‌ ಪಾವತಿಗೆ ಸಾರ್ವಜನಿಕರ ಪ್ರತಿಕ್ರಿಯೆ ಹಾಗೂ ಅದರ ಪರಿಣಾಮಗಳನ್ನು ಗಮನಿಸಿದ ನಂತರ ದೇಶದ ಇತರ ಭಾಗಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದು ಕೇಂದ್ರ ಸಂಪರ್ಕ ಖಾತೆ ರಾಜ್ಯ ಸಚಿವ ಸಿಕ್ದರ್‌ ಲೋಕಸಭೆಗೆ ಬುಧವಾರ ತಿಳಿಸಿದ್ದಾರೆ.

ಈ- ಬಿಲ್‌ ವ್ಯವಸ್ಥೆಯನ್ನು ನೀರಿನಬಿಲ್‌ ಪಾವತಿ ಮತ್ತು ವಿದ್ಯುತ್‌ ಬಿಲ್‌ ಸಂದಾಯ ಮಾಡುವುದಕ್ಕೂ ವಿಸ್ತರಿಸುವ ಯೋಚನೆ ಸಂಪರ್ಕ ಸಚಿವಾಲಯದ ಮುಂದಿದೆ ಎಂದು ಸಿಕ್ದರ್‌ ಹೇಳಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X