ಮನೆ ಕಟ್ಟುವವರಿಗೆ, ಕೊಳ್ಳುವವರಿಗೆ ಒಂದು ಸಂತಸದ ಸುದ್ದಿ
ಬೆಂಗಳೂರು : ಮನೆ ಕೊಳ್ಳುವವರಿಗೆ, ಕಟ್ಟ ಬಯಸುವವರಿಗೆ ಒಂದು ಸಿಹಿ ಸುದ್ದಿ. ಕೆನರಾಬ್ಯಾಂಕ್ ಗೃಹ ಸಾಲದ ಬಡ್ಡಿ ದರವನ್ನು ಗಣನೀಯ ಪ್ರಮಾಣದಲ್ಲಿ ಇಳಿಸಿದೆ. ಈಗ ಎರಡು ಲಕ್ಷ ರುಪಾಯಿಗಳ ವರೆಗಿನ (ಫ್ಲೋಟಿಂಗ್ ರೇಟ್ ಆಪ್‌ಷನ್ ಅಡಿಯಲ್ಲಿ) ಗೃಹ ಸಾಲಕ್ಕೆ ನೀವು ಪಾವತಿಸಬೇಕಾದ ಬಡ್ಡಿ ದರ ಕೇವಲ 11.50 ಮಾತ್ರ.
ಫಿಕ್ಸೆಡ್ ರೇಟ್ ಸಾಲಯೋಜನೆಯಡಿ ಎರಡು ಲಕ್ಷ ರುಪಾಯಿಗೂ ಹೆಚ್ಚು ಹಾಗೂ ಹತ್ತು ಲಕ್ಷ ರುಪಾಯಿಗಳ ಒಳಗೆ ಗೃಹ ಸಾಲ ಪಡೆದರೆ ಆಗ ನೀವು ತೆರಬೇಕಾದ ಬಡ್ಡಿ ದರ ಪ್ರತಿಶತ 12ರಷ್ಟು. 10ಲಕ್ಷಕ್ಕೂ ಹೆಚ್ಚಿನ ಸಾಲಕ್ಕೆ 12.50 ದರದಲ್ಲಿ ಬಡ್ಡಿ ವಿಧಿಸಲಾಗುತ್ತದೆ ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.
ಫ್ಲೋಟಿಂಗ್ ರೇಟ್ ಅಡಿಯಲ್ಲಿ 2 ಲಕ್ಷ ರುಪಾಯಿಯಿಂದ 10 ಲಕ್ಷ ರುಪಾಯಿಗಳ ವರೆಗೆ ಸಾಲ ಪಡೆದರೆ ಆಗ 12.25ರ ಬಡ್ಡಿ ದರ ಅನ್ವಯವಾಗುತ್ತದೆ. 10 ಲಕ್ಷಕ್ಕೂ ಮಿಗಿಲಾದ ಸಾಲಕ್ಕೆ 12.50ಯ ಬಡ್ಡಿದರವನ್ನೇ ವಿಧಿಸಲಾಗುತ್ತದೆ ಎಂದು ಹೇಳಿಕೆ ತಿಳಿಸಿದೆ.
ಶುಲ್ಕವೂ ಮನ್ನಾ : ಮತ್ತೂ ಒಂದು ಸಂತೋಷದ ಸುದ್ದಿ... 2002ರ ಮಾರ್ಚ್ 31ರೊಳಗೆ ನೀವು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಿದರೆ, ಸಾಲಪ್ರಕ್ರಿಯೆಗಾಗಿ ಪಡೆಯಲಾಗುತ್ತಿದ್ದ ಪ್ರೋಸಸಿಂಗ್ ಫೀಯನ್ನು ಕೂಡ ಸಂಪೂರ್ಣವಾಗಿ ಮನ್ನಾ ಮಾಡಲಾಗುತ್ತದೆ.
(ಪಿ.ಟಿ.ಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications