ನಗರಸಭೆ ಸ್ಥಳಾಂತರ ವಿರೋಧಿಸಿ ಯಲಹಂಕ ಬಂದ್
ಬೆಂಗಳೂರು : ಯಲಹಂಕ ನಗರಸಭೆ ಸ್ಥಳಾಂತರ ವಿರೋಧಿಸಿ ನಾಗರಿಕ ಹಿತರಕ್ಷಣಾ ಸಮಿತಿ ಬುಧವಾರ(ಡಿ.5) ಕರೆ ನೀಡಿದ್ದ ಯಲಹಂಕ ಬಂದ್ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಯಲಹಂಕ ಪ್ರದೇಶದಲ್ಲಿನ ಅಂಗಡಿ ಮುಂಗಟ್ಟು , ಸಿನಿಮಾ ಮಂದಿರಗಳು ಮುಚ್ಚಿವೆ. ಕೆಲವು ಶಾಲಾ ಕಾಲೇಜುಗಳು ಮುನ್ನೆಚ್ಚರಿಕೆ ಕ್ರಮವಾಗಿ ಬುಧವಾರವನ್ನು ರಜೆ ದಿನವನ್ನಾಗಿ ಘೋಷಿಸಿವೆ. ಬಂದ್ ಕರೆಗೆ ಯಲಹಂಕ ವ್ಯಾಪ್ತಿಯ ಬಹುತೇಕ ಬಡಾವಣೆಗಳಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು , ವಾಹನ ಸಂಚಾರ ಕೂಡ ಬಿರುಸು ಕಳೆದುಕೊಂಡಿದೆ.
ನಗರಸಭೆ ಸ್ಥಳಾಂತರವನ್ನು ವಿರೋಧಿಸಿ ನಾಗರಿಕ ಹಿತರಕ್ಷಣಾ ಸಮಿತಿಯ ಕಾರ್ಯಕರ್ತರು ಹಾಗೂ ನಾಗರಿಕರು ಯಲಹಂಕದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಧಿಕ್ಕಾಧಿರ ಕೂಗಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications