ಹಾವೇರಿ, ಗದಗ ದೂರವಾಣಿ ಕೇಂದ್ರಗಳ ಸಾಮರ್ಥ್ಯ ಹೆಚ್ಚಳ
ಹುಬ್ಬಳ್ಳಿ : ದೂರಸಂಪರ್ಕ ಇಲಾಖೆಯು ರಾಜ್ಯದ ಹಾವೇರಿ, ಗದಗ ಮತ್ತು ನರೇಗಲ್ ದೂರವಾಣಿ ವಿನಿಮಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಿದ್ದು, ಮೂರೂ ಕೇಂದ್ರಗಳ ಸಾಮರ್ಥ್ಯ ಹೆಚ್ಚಿಸಿದೆ. ಈ ವಿಷಯವನ್ನು ಭಾರತ್ ಸಂಚಾರ ನಿಗಮ ನಿಯಮಿತದ ಧಾರವಾಡ ಟೆಲಿಕಾಂ ಜಿಲ್ಲಾ ವ್ಯವಸ್ಥಾಪಕ ಜೆ.ಕೆ. ಗುಪ್ತಾ ತಿಳಿಸಿದ್ದಾರೆ.
ನವೆಂಬರ್ ತಿಂಗಳೊಂದರಲ್ಲೇ ಧಾರವಾಡ ಟೆಲಿಕಾಂ ಜಿಲ್ಲೆಯ ವತಿಯಿಂದ 1,044 ಹೊಸ ದೂರವಾಣಿ ಸಂಪರ್ಕ ಒದಗಿಸಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳ್ದಡಿ ಮತ್ತು ಬಲಗನೂರಂದ್ ಹರ್ಟಿ ದೂರವಾಣಿ ವಿನಿಮಯ ಕೇಂದ್ರಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಲಾಗಿದ್ದು, ದೂರವಾಣಿ ಗ್ರಾಹಕರಿಗೆ ಇನ್ನೂ ಉತ್ತಮ ಸೇವೆ ಒದಗಿಸಲು ಸಹಾಯಕವಾಗಿದೆ ಎಂದು ಅವರು ತಿಳಿಸಿದ್ದಾರೆ.
(ಪಿ.ಟಿ.ಐ/ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications