ವಿಜಾಪುರದಲ್ಲಿ ನಕಲಿ ಛಾಪಾ ಕಾಗದ ಜಾಲ : ನಾಲ್ವರ ಬಂಧನ
ವಿಜಾಪುರ : ನಕಲಿ ಛಾಪಾ ಕಾಗದ ಮಾರುತ್ತಿದ್ದ ನಾಲ್ವರನ್ನು ನಗರ ಪೊಲೀಸರು ಬಂಧಿಸಿದ್ದು, ಒಟ್ಟು 1 ಲಕ್ಷ 30 ಸಾವಿರ ರುಪಾಯಿ ಮೌಲ್ಯದ ನಕಲಿ ಛಾಪಾ ಕಾಗದಗಳನ್ನು ವಶಪಡಿಸಿಕೊಂಡಿದ್ದಾರೆ.
ಬಸು ಗೋಪಿ ಲಮಾಣಿ, ಶಿವಪ್ಪ ಲಿಂಗಪ್ಪ ಹಳ್ಳೂರ, ಬಸವರಾಜ ಸುರೇಂದ್ರ ನಾಯಕ ಮತ್ತು ಜಂಗ್ಲಿ ಸಾಹೇಬ ರಾಜೇಸಾಬ ಸನದಿ ಎಂಬುವರೇ ಬಂಧಿತ ಆಪಾದಿತರು. ಕಳೆದ ತಿಂಗಳ 8ನೇ ತಾರೀಖು ಬಸು ಗೋಪು ಲಮಾಣಿಯನ್ನು ಆನಂದ ಮಹಲ್ ಉದ್ಯಾನದಲ್ಲಿ ಪೊಲೀಸರು ಮಾಲಿನ ಸಮೇತ ಬಂಧಿಸಿದ್ದರು. ಆಗ 23 ನಕಲಿ ಛಾಪಾ ಕಾಗದಗಳನ್ನು ವಶಪಡಿಸಿಕೊಂಡಿದ್ದರು. ಲಮಾಣಿ ನೀಡಿದ ಹೇಳಿಕೆಯ ಮೇರೆಗೆ ಇತರ ಮೂವರನ್ನು ಬಂಧಿಸಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications