ಬೆಳಗಾವಿಯಲ್ಲಿ ಲಾಡೆನ್ ಟೀ ಷರ್ಟ್ ಮಾರಾಟ, ಒಬ್ಬನ ಬಂಧನ
ಬೆಳಗಾವಿ: ಅಂತರರಾಷ್ಟ್ರೀಯ ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ಸೋಲು ಖಚಿತ. ಅಮೆರಿಕ ಪಡೆಗಳು ಲಾಡೆನ್ ಅಡಗುತಾಣದತ್ತ ಮುಂದುವರಿಯುತ್ತಿವೆ ಎನ್ನುವ ವರದಿಗಳು ಯುದ್ಧ ಭೂಮಿಯಿಂದ ಪುಂಖಾನುಪುಂಖವಾಗಿ ಹೊರಬೀಳುತ್ತಿದ್ದರೆ, ಇನ್ನೊಂದೆಡೆ ಲಾಡೆನ್ ಅಭಿಮಾನಿಗಳು ಹಾಗೂ ವಿರೋಧಿಗಳು ಹೆಚ್ಚಾಗುತ್ತಿದ್ದಾರೆ.
ಲಾಡೆನ್ ಚಿತ್ರವಿರುವ ಟಾಯ್ಲೆಟ್ ಪೇಪರ್‌ಗಳನ್ನು ಒಸಕಿ ಒಸಕಿ ಅಮೆರಿಕನ್ನರು ಬಿಸಾಕುತ್ತಿದ್ದಾರೆ. ಕರ್ನಾಟಕದಲ್ಲಿ ಲಾಡೆನ್ ಚಿತ್ರವಿರುವ ಟಿ ಷರ್ಟ್‌ಗಳು ಕಾಣಿಸಿಕೊಂಡಿವೆ. ಲಾಡೆನ್ ಭಾವಚಿತ್ರವಿದ್ದ ಟಿ ಷರ್ಟ್ ಮಾರುತ್ತಿದ್ದ ವ್ಯಕ್ತಿಯಾಬ್ಬನನ್ನು ಪೊಲೀಸರು ಬೆಳಗಾವಿಯಲ್ಲಿ ಬಂಧಿಸಿದ್ದಾರೆ.
ಮಹಾಂತೇಶ ನಗರದ ಜಮೀರ್ ದರ್ಗಾ ಎನ್ನುವ ವ್ಯಕ್ತಿ ಲಾಡೆನ್ ಚಿತ್ರವಿರುವ ಟೀ ಷರ್ಟನ್ನು ಅಂಗಡಿಯಲ್ಲಿ ಮಾರುತ್ತಿದ್ದ ಎಂದು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ. ಬಂಧಿತ ಜಮೀರ್, ಲಾಡೆನ್ ಚಿತ್ರವಿರುವ ಟಿ ಷರ್ಟ್‌ಗಳನ್ನು ಮುಂಬೈನಿಂದ ಬೆಳಗಾವಿಗೆ ತಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications