ಬ್ರಿಟೀಷ್ ಕೌನ್ಸಿಲ್ ಲೈಬ್ರರಿಯಿಂದ ವಿಶ್ವಬ್ಯಾಂಕ್ ಮಾಹಿತಿ ಮಳಿಗೆ
ಬೆಂಗಳೂರು : ಬ್ರಿಟಿಷ್ ಕೌನ್ಸಿಲ್ ಲೈಬ್ರರಿ(ಬಿಸಿಎಲ್)ಯು ನಗರದಲ್ಲಿ ವಿಶ್ವಬ್ಯಾಂಕ್‌ನ ಮಾಹಿತಿ ಮಳಿಗೆಯಾಂದನ್ನು ಆರಂಭಿಸುತ್ತಿದ್ದು , ಡಿಸೆಂಬರ್ 6ರಂದು ಈ ಮಳಿಗೆ ಉದ್ಘಾಟನೆಯಾಗಲಿದೆ.
ಬೆಂಗಳೂರಿನಲ್ಲಿ ಪ್ರಾರಂಭವಾಗುತ್ತಿರುವ ಮಳಿಗೆ ದೇಶದ ಮೂರನೇ ವಿಶ್ವಬ್ಯಾಂಕ್ ಮಾಹಿತಿ ಮಳಿಗೆ ಎನ್ನಿಸಿಕೊಂಡಿದೆ. ಹೈದರಾಬಾದ್, ಅಹ್ಮದಾಬಾದ್‌ನಲ್ಲಿ ವಿಶ್ವಬ್ಯಾಂಕ್ ಮಾಹಿತಿ ಮಳಿಗೆಗಳು ಈಗಾಗಲೇ ಕಾರ್ಯಪ್ರವೃತ್ತವಾಗಿವೆ. ವಿಶ್ವಬ್ಯಾಂಕ್ ಮತ್ತು ಬಿಸಿಎಲ್ , ಜಾಗತಿಕ ಪಾಲುದಾರಿಕೆಯ ಒಪ್ಪಂದ ಮಾಡಿಕೊಂಡಿದ್ದು ವಿಶ್ವಬ್ಯಾಂಕ್‌ಗೆ ಸಂಬಂಧಪಟ್ಟ ಎಲ್ಲ ಮಾಹಿತಿ ಸಂಪನ್ಮೂಲಗಳನ್ನು ಆಸಕ್ತರು ಈ ಮಳಿಗೆಯಲ್ಲಿ ಪಡೆಯಬಹುದು.
ಹೊಸದಾಗಿ ಆರಂಭವಾಗುವ ಮಳಿಗೆಯಲ್ಲಿ ಬ್ಯಾಂಕ್ ಗೆ ಸಂಬಂಧಿಸಿದ ಹಳೇ ಪ್ರಕಟಣೆಗಳು, ವಿಶ್ವ ಅಭಿವೃದ್ಧಿಯ ವರದಿಗಳು, ವಿಶ್ವಬ್ಯಾಂಕ್‌ನ ವಾರ್ಷಿಕ ವರದಿಗಳು, ಅಧ್ಯಯನ ಮಾಹಿತಿಗಳು ಮತ್ತು ವಿಶ್ವಬ್ಯಾಂಕ್‌ನ ವಿವಿಧ ಯೋಜನೆಗಳ ಮಾಹಿತಿಯನ್ನೂ ಪಡೆಯಬಹುದು.
ಬಿಸಿಎಲ್‌ನ ಈ ವಿಶ್ವಬ್ಯಾಂಕ್ ಮಾಹಿತಿ ಕೇಂದ್ರದಿಂದ ಶೈಕ್ಷಣಿಕ ಕ್ಷೇತ್ರಗಳಿಗೆ, ಷೇರು ಮಾರುಕಟ್ಟೆ ವ್ಯವಹಾರಗಳನ್ನು ನಿರ್ವಹಿಸುವವರಿಗೆ, ಅಧ್ಯಯನಕಾರರಿಗೆ ಪ್ರಯೋಜನವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ವಿಳಾಸ :
ಈ-ಮೇಯ್ಲ್ : [email protected] ವೆಬ್‌ಸೈಟ್: www.bclindia.org
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಬ್ರಿಟೀಷ್ ಕೌನ್ಸಿಲ್ ಲೈಬ್ರರಿ ಆಧುನೀಕರಣ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications