Get Updates
Get notified of breaking news, exclusive insights, and must-see stories!

ಡಿ.4 ರಿಂದ ಬೆಂಗಳೂರಲ್ಲಿ ಭಾರತೀಯ ರೇಷ್ಮೆ ಮೇಳ, ನೀವು ಬನ್ನಿರಿ!

ಬೆಂಗಳೂರು: 2001 ರಲ್ಲಿ ‘ಭಾರತದ ರೇಷ್ಮೆ ’ಎನ್ನುವ ರಾಷ್ಟ್ರಮಟ್ಟದ ರೇಷ್ಮೆ ಪ್ರದರ್ಶನವನ್ನು ಕೇಂದ್ರ ರೇಷ್ಮೆ ಮಂಡಳಿ ಡಿಸೆಂಬರ್‌ 4 ರಿಂದ 9 ರವರೆಗೆ ಏರ್ಪಡಿಸಿದೆ. ದೇಶದಲ್ಲಿ ಉತ್ಪಾದನೆಯಾಗುವ ವಿವಿಧ ನಮೂನೆಯ ರೇಷ್ಮೆ ಹಾಗೂ ರೇಷ್ಮೆ ಉತ್ಪನ್ನಗಳಿಗೆ ಈ ಪ್ರದರ್ಶನ ಷೋಕೇಸ್‌ ಆಗಲಿದೆ.

150 ಸ್ಟಾಲ್‌ಗಳನ್ನು ಹೊಂದಿರುವ ಈ ಪ್ರದರ್ಶನದಲ್ಲಿ ಸಂಶೋಧನೆ, ಅಭಿವೃದ್ಧಿ ಕ್ಷೇತ್ರಗಳ ಏಜೆನ್ಸಿಗಳ ಪ್ರತಿನಿಧಿಗಳು ಭಾಗವಹಿಸುತ್ತಾರೆ. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸಂಘಟನೆಗಳು, ಸಿಲ್ಕ್‌ ಹ್ಯಾಂಡ್‌ಲೂಂ ಕೋ ಆಪರೇಟಿವ್ಸ್‌ , ಸಿಲ್ಕ್‌ ಗಾರ್ಮೆಂಟ್‌ ಮ್ಯಾನುಫ್ಯಾಕ್ಚರ್ಸ್‌ , ರಫ್ತುದಾರರು, ಮಾರಾಟಗಾರರು, ಸ್ವಯಂ ಸೇವಕ ಸಂಘಗಳು ಸೇರಿದಂತೆ ವಿವಿಧ ವಲಯಗಳ ಪ್ರತಿನಿಧಿಗಳು ಪ್ರದರ್ಶನದಲ್ಲಿ ಭಾಗವಹಿಸುವರು ಎಂದು ರೇಷ್ಮೆ ಮಂಡಳಿಯ ಪ್ರಕಟಣೆ ತಿಳಿಸಿದೆ.

ಉತ್ಪಾದಕರು ಹಾಗೂ ವ್ಯಾಪಾರಿಗಳ ನಡುವೆ ಸಂಪರ್ಕ ಕೊಂಡಿಯಾಗಿ ಈ ಪ್ರದರ್ಶನ ಕಾರ್ಯ ನಿರ್ವಹಿಸುವ ನಿರೀಕ್ಷೆಯಿದೆ. ಅಂತೆಯೇ ದೇಶದ ವಿವಿಧ ರೇಷ್ಮೆ ವಿನ್ಯಾಸಕಾರರು, ತಂತ್ರಜ್ಞರನ್ನು ಒಂದು ವೇದಿಕೆಯಡಿ ತರುವ ಅಗ್ಗಳಿಕೆಯೂ ಈ ಪ್ರದರ್ಶನದ್ದಾಗಲಿದೆ. ಸ್ಥಳೀಯ ಹಾಗೂ ವಿದೇಶಿ ಗ್ರಾಹಕರು ಪ್ರದರ್ಶನಕ್ಕೆ ಆಗಮಿಸುವ ವಿಶ್ವಾಸವನ್ನು ರೇಷ್ಮೆ ಮಂಡಳಿ ಹೊಂದಿದ್ದು , ಈ ಅವಕಾಶವನ್ನು ಭಾರತೀಯ ರೇಷ್ಮೆ ಜನಪ್ರಿಯಗೊಳಿಸಲು ಬಳಸಿಕೊಳ್ಳಲಿದೆ.

(ಪಿಟಿಐ)

ಅಹಿಂದ್‌ ಬಗ್ಗೆ ನಿಮಗೇನನಿಸುತ್ತೆ ?

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+