ಅಂತರ್ಜಾಲ ಪ್ರವೇಶಿಸಿದ ಮಂಡ್ಯ ಜಿಲ್ಲಾ ಪೊಲೀಸ್ ಠಾಣೆ
ಬೆಂಗಳೂರು : ಮಂಡ್ಯ ಜಿಲ್ಲಾ ಪೊಲೀಸ್ ಠಾಣೆಯೀಗ ಅಂತರ್ಜಾಲ ಪ್ರವೇಶಿಸಿದೆ. ಮಂಡ್ಯ ಜಿಲ್ಲಾ ಪೊಲೀಸ್ ಠಾಣೆಯ ವೆಬ್ ಸೈಟ್ www.mandyapolice.netನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ವಿವಿ ಭಾಸ್ಕರ್ ಭಾನುವಾರ ಉದ್ಘಾಟಿಸಿದರು.
ಇನ್ನು ಮುಂದೆ ಜಿಲ್ಲೆಯ ಯಾವುದೇ ಅಪರಾಧ ಪ್ರಕರಣಗಳನ್ನು ಆನ್‌ಲೈನ್ ಮುಖಾಂತರವೇ ದಾಖಲಿಸಬಹುದು. ವಾಹನಗಳು ಕಳವಾದರೆ, ವ್ಯಕ್ತಿಗಳು ಯಾರಾದರೂ ಕಾಣೆಯಾದರೆ ಆ ಬಗೆಗಿನ ಲಭ್ಯ ಮಾಹಿತಿಗಳು ವೆಬ್ ಸೈಟಿನಲ್ಲಿ ಸಿಗುತ್ತವೆ. ವೆಬ್‌ಸೈಟನ್ನು ಬೆಂಗಳೂರಿನ ವ್ಯಾಪ್ಸ್ ಟೆಕ್ನೋ ಪ್ರೆೃವೇಟ್ ಲಿಮಿಟೆಡ್ ವಿನ್ಯಾಸಗೊಳಿಸಿದೆ.
ಮಾನವ ಹಕ್ಕುಗಳ ಬಗೆಗಿನ ಮಾಹಿತಿಯನ್ನೂ ಒಳಗೊಂಡಿರುವ ಈ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರ ಸಾಮಾನ್ಯ ಸಂಶಯಗಳಿಗೂ ಉತ್ತರ ಲಭ್ಯವಿದೆ. ಯಾವ ಸನ್ನಿವೇಶಗಳಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಬಹುದು, ಮಂಡ್ಯದಲ್ಲಿನ ಪ್ರವಾಸಿ ಸ್ಥಳಗಳು ಯಾವುದು ಎಂಬ ಬಗೆಗಿನ ಎಲ್ಲ ಮಾಹಿತಿಯನ್ನು ಈ ವೆಬ್‌ಸೈಟ್ ಒಳಗೊಂಡಿದೆ.
(ಇನ್ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ












Click it and Unblock the Notifications