ಗುಲ್ಬರ್ಗದ ತಾವರಗೇರಾ ಕ್ರಾಸ್ ಬಳಿ ಅಪಘಾತ,ನಾಲ್ವರ ಸಾವು
ಗುಲ್ಬರ್ಗ : ಇಲ್ಲಿನ ಗುಲ್ಬರ್ಗ- ಬೀದರ್ ರಸ್ತೆಯ ತಾವರಗೇರಾ ಕ್ರಾಸ್ ಬಳಿ ಸಾಮಾನು ಸಾಗಿಸುವ ಗೂಡ್ಸ್ ಟೆಂಪೋ ಹಾಗೂ ಜೀಪ್ ಡಿಕ್ಕಿ ಹೊಡೆದು, ಅಪಘಾತದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ನತದೃಷ್ಟರನ್ನು ಸಿದ್ರಾಮಪ್ಪ ಜೇವರ್ಗಿಕರ್, ಅಂಕಲಗಿ(45), ಸಿದ್ರಾಮಪ್ಪ ಮಲ್ಲಪ್ಪ ಪೂಜಾರಿ ತೋಳಿಗೋಗಿ (40), ಭೀಮಶಾ ಶರಣಪ್ಪ ಮುಪ್ಪಾನವರ್ ಮಹಾಗಾಂವ್(47) ಮತ್ತು ಜೀಪ್ ಚಾಲಕ ಶಾಂತವೀರಪ್ಪ ರೇವಪ್ಪ ಮೂಲಿಮನಿ(42) ಎಂದು ಗುರುತಿಸಲಾಗಿದೆ.
ಇತರ ಏಳು ಮಂದಿ ಶಿಕ್ಷಕರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಗುಲ್ಬರ್ಗದ ನಿವಾಸಿ , ಶಿಕ್ಷಕ, ಮಧುಕರ ಮಾಶಾಳಕರ್ ಎಂಬವರ ತಲೆಗೆ ಭಾರೀ ಪೆಟ್ಟು ಬಿದ್ದಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ . ಗಾಯಾಳುಗಳನ್ನು ಹತ್ತಿರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications