ಸದ್ಯದಲ್ಲೇ ಬೆಂಗಳೂರಿನಲ್ಲಿ ಮಲೇಷಿಯಾದ ರಾಯಭಾರಿ ಕಚೇರಿ

ಬೆಂಗಳೂರು : ಪ್ರವಾಸಿಗಳನ್ನು ಆಕರ್ಷಿಸುವ ಉದ್ದೇಶದಿಂದ ಮಲೇಷಿಯಾ ಸರಕಾರವು ಬೆಂಗಳೂರಿನಲ್ಲಿ ತನ್ನ ರಾಯಭಾರಿಯ ಕಚೇರಿಯನ್ನು ಆರಂಭಿಸಲು ನಿರ್ಧರಿಸಿದೆ.

ಬೆಂಗಳೂರಿನ ಜೊತೆಗೆ ಮುಂಬಯಿ, ಹೈದರಾಬಾದ್‌ಗಳಲ್ಲಿಯೂ ರಾಯಭಾರಿ ಕಚೇರಿಯನ್ನು ಆರಂಭಿಸಲು ಯೋಜನೆಯನ್ನು ರೂಪಿಸಲಾಗಿದೆ ಎಂದು ಮಲೇಷಿಯಾ ಸರಕಾರದ ಉಪನಿರ್ದೇಶಕ(ವೀಸಾ) ಅಬ್ದುಲ್‌ ವಹಾಬ್‌ ತಿಳಿಸಿದ್ದಾರೆ. ಅವರು ನಗರದಲ್ಲಿ ಶುಕ್ರವಾರ ಮಲೇಷಿಯನ್‌ ಪ್ರವಾಸಿ ಮಂಡಳಿ ಮತ್ತು ಏರ್‌ಲೈನ್ಸ್‌ ಆಯೋಜಿಸಿದ್ದ ಮಲೇಷಿಯನ್‌ ಫ್ಯಾಷನ್‌ ಷೋನಲ್ಲಿ ಮಾತನಾಡುತ್ತಿದ್ದರು.

ಭಾರತದ ಮೂರು ಪ್ರಮುಖ ನಗರಗಳಲ್ಲಿ ರಾಯಭಾರಿ ಕಚೇರಿ ಸ್ಥಾಪಿಸುವ ಬಗ್ಗೆ ಗುಣಾತ್ಮಕವಾಗಿ ಪ್ರತಿಕ್ರಿಯಿಸಿದೆ. ವಲಸೆಗೆ ಸಂಬಂಧಿಸಿದಂತೆ ಕಚೇರಿ ತೆರೆಯಲು ಮಲೇಷಿಯಾ ಸರಕಾರ ಇಚ್ಚಿಸಿತ್ತು. ಆದರೆ ಭಾರತ ಸರಕಾರ ಪೂರ್ಣ ಪ್ರಮಾಣದ ರಾಯಭಾರಿ ಕಚೇರಿಗಳನ್ನು ಸ್ಥಾಪಿಸಲು ಒಪ್ಪಿಗೆ ನೀಡಿದೆ ಎಂದು ವಹಾಬ್‌ ತಿಳಿಸಿದರು. ಮಲೇಷಿಯಾಕ್ಕೆ ಬೆಂಗಳೂರು ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ರಾಯಭಾರಿ ಕಚೇರಿ ತೆರೆಯುವುದು ಅತ್ಯಂತ ಉಪಯುಕ್ತವಾಗಲಿದೆ ಎಂದು ವಹಾಬ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+