Get Updates
Get notified of breaking news, exclusive insights, and must-see stories!

ಪೋಲಿಯೋ ಮುಕ್ತಿಯ ಗಡಿಯಲ್ಲಿ ಕರ್ನಾಟಕ -ಮಲಕರೆಡ್ಡಿ

ಬೆಂಗಳೂರು : ದೇಶದಲ್ಲಿ 129 ಪೋಲಿಯೋ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಕರ್ನಾಟಕದ ಕೊಡುಗೆ ಸೊನ್ನೆ. ನಮ್ಮ ರಾಜ್ಯ ಸಂಪೂರ್ಣ ಪೋಲಿಯೋ ಮುಕ್ತವಾಗುವ ಕಾಲ ಹತ್ತಿರಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಎ.ಬಿ.ಮಲಕರೆಡ್ಡಿ ಹೇಳಿದರು.

1995ರಿಂದ ಈವರೆಗೆ ಹಮ್ಮಿಕೊಂಡು ಬಂದಿರುವ ಉಚಿತ ಪಲ್ಸ್‌ ಪೋಲಿಯೋ ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಿರುವುದಕ್ಕೆ ಇದು ಸಾಕ್ಷಿ. ಈ ಯೋಜನೆಯನ್ನು ಇನ್ನೂ ಮುಂದುವರೆಸಲು ನಿರ್ಧರಿಸಿದ್ದು 5 ವರ್ಷದೊಳಗಿನ ಮಕ್ಕಳಿಗೆ ಬರುವ ಡಿಸೆಂಬರ್‌ 2 ಮತ್ತು ಜನವರಿ 20, 2002ರಂದು ಪಲ್ಸ್‌ ಪೋಲಿಯೋ ಲಸಿಕೆ ಹಾಕಲಾಗುವುದು ಎಂದು ಸಚಿವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಎಪ್ಪತ್ತು ಲಕ್ಷ ಮಕ್ಕಳಿಗೆ ಪಲ್ಸ್‌ ಪೋಲಿಯೋ ಲಸಿಕೆ ಹಾಕಲು 27,603 ಬೂತ್‌ಗಳನ್ನು ನಿಯೋಜಿಸಲಾಗುವುದು. ಲಸಿಕೆಯ 107 ಲಕ್ಷ ಡೋಸ್‌ಗಳನ್ನು ಆರೋಗ್ಯ ಕೇಂದ್ರಗಳಿಗೆ ಈಗಾಗಲೇ ಪೂರೈಸಿದ್ದೇವೆ. ಪ್ರತಿ ಬೂತ್‌ನಲ್ಲಿ 250 ಮಕ್ಕಳಿಗೆ ಲಸಿಕೆ ಹಾಕಲಾಗುವುದು ಎಂದರು.

ಹೊಸ ಕಾಯ್ದೆ : ಅಕ್ರಮ ಲೈಂಗಿಕ ಪ್ರಕರಣಗಳ ಪತ್ತೆಗೆ ಸಂಬಂಧಿಸಿದಂತೆ ‘ಜನನ ಪೂರ್ವ(ಪ್ರಿನೆಟಲ್‌) ಪರೀಕ್ಷಾ ಪತ್ತೆ ತಂತ್ರ (ನಿಯಂತ್ರಣಾ) ಕಾಯ್ದೆ’ಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದ ನಂತರ 600 ಅಲ್ಟ್ರಾ ಸೋನೋಗ್ರಫಿಕ್‌ ಸೆಂಟರ್‌ಗಳು ನೋಂದಾಯಿಸಿಕೊಂಡಿವೆ. ಕಾಯ್ದೆಯನ್ವಯ ಇಂಥಾ ಕೇಂದ್ರಗಳ ನೋಂದಾವಣೆ ಕಡ್ಡಾಯ. ಇಲ್ಲವಾದಲ್ಲಿ 3 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 10 ಸಾವಿರ ರುಪಾಯಿ ದಂಡವನ್ನು ಶಿಕ್ಷೆಯ ರೂಪದಲ್ಲಿ ವಿಧಿಸಬಹುದಾಗಿದೆ. ತಮ್ಮಲ್ಲಿ ಪರೀಕ್ಷೆಗೊಳಗಾಗುವ ಎಲ್ಲಾ ಹೆಂಗಸರ ಹೆಸರನ್ನೂ ದಾಖಲಿಸಿಕೊಳ್ಳುವುದು ಕಡ್ಡಾಯ ಎಂದು ಮಲಕರೆಡ್ಡಿ ಹೇಳಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+