Get Updates
Get notified of breaking news, exclusive insights, and must-see stories!

ನೈವೇಲಿಯಿಂದ ರಾಜ್ಯಕ್ಕೆ ವಾರ್ಷಿಕ 938.44 ದಶಲಕ್ಷ ಯೂನಿಟ್‌ ವಿದ್ಯುತ್‌

ಬೆಂಗಳೂರು : ನೈವೇಲಿ ಲಿಗ್ನೈಟ್‌ ಕಾರ್ಪೊರೇಷನ್‌(ಎನ್‌ಎಲ್‌ಸಿ) ಜತೆ ಕರ್ನಾಟಕ ವಿದ್ಯುತ್‌ ಪ್ರಸರಣಾ ನಿಗಮ ನಿಯಮಿತ (ಕೆಪಿಟಿಸಿಎಲ್‌) ವಿದ್ಯುತ್‌ ಖರೀದಿ ಒಪ್ಪಂದವೊಂದಕ್ಕೆ ಶುಕ್ರವಾರ ಸಹಿ ಹಾಕಿದೆ. ಇದರಿಂದ ವರ್ಷಕ್ಕೆ 938.44 ದಶಲಕ್ಷ ಯೂನಿಟ್‌ ವಿದ್ಯುತ್ತನ್ನು ಕೆಪಿಟಿಸಿಎಲ್‌ ಪಡೆಯಲಿದೆ.

ಎರಡು ವಿಸ್ತುತ ಯೋಜನೆಗಳಡಿಯಲ್ಲಿ ಎನ್‌ಎಲ್‌ಸಿ ತಲಾ 210 ಮೆಗಾವ್ಯಾಟ್‌ ಸಾಮರ್ಥ್ಯದ ಎರಡು ಹಾಗೂ 500 ಮೆಗಾವ್ಯಾಟ್‌ ಸಾಮರ್ಥ್ಯದ ಒಂದು ಕಲ್ಲಿದ್ದಲು ವಿದ್ಯುತ್‌ ಘಟಕಗಳನ್ನು ಸ್ಥಾಪಸಿಲಿದೆ. ಈ ಯೋಜನೆಗಳಡಿಯಲ್ಲಿ ಉತ್ಪತ್ತಿಯಾಗುವ ಒಟ್ಟಾರೆ ವಿದ್ಯುತ್ತಿನಲ್ಲಿ 156.4 ಮೆಗಾ ವ್ಯಾಟ್‌ ಕರ್ನಾಟಕಕ್ಕೆ ಸೆರಿದ್ದು. ಬರುವ ವರ್ಷ ಮಾರ್ಚ್‌ನಲ್ಲಿ ಮೊದಲ ಘಟಕ ಸ್ಥಾಪನೆಯಾಗುವ ನಿರೀಕ್ಷೆಯಿದೆ. ಎರಡನೇ ಘಟಕ ಅಕ್ಟೋಬರ್‌ ತಿಂಗಳಲ್ಲಿ ತಲೆಯೆತ್ತಲಿದ್ದು, 500 ಮೆಗಾವ್ಯಾಟ್‌ ಸಾಮರ್ಥ್ಯದ ಘಟಕ 2006-07ರಲ್ಲಿ ಸ್ಥಾಪಿತವಾಗಲಿದೆ.

ಇದೇ ವೇಳೆಯಲ್ಲಿ ವಿದ್ಯುತ್‌ ಉದ್ದಿಮೆ ನಿಗಮದೊಟ್ಟಿಗೆ ಕೆಪಿಟಿಸಿಎಲ್‌ ಮಾಡಿಕೊಂಡಿರುವ ಒಪ್ಪಂದದಲ್ಲಿ ತಿದ್ದುಪಡಿ ತಂದಿದ್ದು, ಪಶ್ಚಿಮ ವಲಯದಲ್ಲಿ ಉತ್ಪಾದನೆಯಾಗುವ 50 ಮೆಗಾವ್ಯಾಟ್‌ ಹೆಚ್ಚುವರಿ ವಿದ್ಯುತ್‌ ಪೂರೈಕೆಯಾಗಲಿದೆ. ಈಗಾಗಲೇ ಕರ್ನಾಟಕಕ್ಕೆ ವಿದ್ಯುತ್‌ ಉದ್ದಿಮೆ ನಿಗಮದ ಮೂಲಕ 100 ಮೆಗಾವ್ಯಾಟ್‌ ವಿದ್ಯುತ್‌ ಸರಬರಾಜಾಗುತ್ತಿದೆ.

ಸುದ್ದಿಗಾರರಿಗೆ ಶುಕ್ರವಾರ ಈ ವಿಷಯ ತಿಳಿಸಿದ ಕೆಪಿಟಿಸಿಎಲ್‌ ಅಧ್ಯಕ್ಷ ವಿ.ಪಿ.ಬಳಿಗಾರ್‌, ಕೇರಳದೊಡನೆ ನಾವು ವಿದ್ಯುತ್‌ ಖರೀದಿಯ ಒಪ್ಪಂದದ ಬಗ್ಗೆ ಮಾತಾಡಿದೆವು. ಆದರೆ ಅದು ಪ್ರತಿ ಯೂನಿಟ್‌ಗೆ 3.50 ರುಪಾಯಿ ಕೇಳುತ್ತಿದೆ. ರಾತ್ರಿ ಹೊತ್ತು ವಿದ್ಯುತ್‌ ಪೂರೈಸಲು ತಮಿಳುನಾಡು ಒಪ್ಪಿಗೆ ನೀಡಿದೆ. ಆದರೆ ಅದು ನಮ್ಮ ನೆರವಿಗೆ ಬರುವಂಥದ್ದಲ್ಲ ಎಂದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+