ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನ್ನೊಂದು ವರ್ಷಗಳಲ್ಲಿ ಬೆಳಗಾವಿ ಜಿಲ್ಲೆಯ ಮನೆ ಮನೆಗೆ ಬೆಳಕು

By Staff
|
Google Oneindia Kannada News

ಬೆಳಗಾವಿ : ಜಿಲ್ಲೆಯ ಎಲ್ಲ ಮನೆಗಳಿಗೆ ವಿದ್ಯುತ್‌ ವ್ಯವಸ್ಥೆ ಕಲ್ಪಿಸಲು ಇನ್ನು 11 ವರ್ಷ ಬೇಕಾಗುತ್ತವೆ ಎಂದು ರಾಜ್ಯ ಇಂಧನ ಖಾತೆ ಸಚಿವ ವೀರಕುಮಾರ್‌ ಪಾಟೀಲ್‌ ಹೇಳಿದ್ದಾರೆ.

2012ರ ವೇಳೆಗೆ ಜಿಲ್ಲೆಯಾದ್ಯಂತ ವಿದ್ಯುತ್‌ ವ್ಯವಸ್ಥೆ ಕಲ್ಪಿಸಲು ಇಂಧನ ಇಲಾಖೆಯು ಯೋಜನೆಯ ನೀಲನಕ್ಷೆಯನ್ನು ಈಗಾಗಲೇ ರೂಪಿಸಲಾಗಿದ್ದು 2007ರ ಹೊತ್ತಿಗೆ ಇದು ಸಂಪೂರ್ಣವಾಗಿ ಜಾರಿಗೆ ಬರುತ್ತದೆ. 2012ರ ಹೊತ್ತಿಗೆ ಪ್ರತಿ ಮನೆಗೆ ವಿದ್ಯುತ್‌ ದೊರೆಯುತ್ತದೆ ಎಂದು ಸಚಿವರು ಹೇಳಿದರು. ಅವರು ಗುರುವಾರ ವಿದ್ಯುತ್‌ ಜಾಗೃತಿ ಅಭಿಯಾನದಲ್ಲಿ ಮಾತನಾಡುತ್ತಿದ್ದರು.

ದೇಶದಲ್ಲಿ ವಿದ್ಯುತ್‌ ಬೇಡಿಕೆ ಮತ್ತು ಸರಬರಾಜು ಒಂದೇ ರೇಖೆಯಲ್ಲಿ ಬರಬೇಕಿದ್ದರೆ ಇನ್ನೂ ಒಂದು ಲಕ್ಷ ಮೆಗಾವ್ಯಾಟ್‌ ಹೆಚ್ಚುವರಿ ವಿದ್ಯುತ್‌ ಉತ್ಪಾದನೆಯ ಅಗತ್ಯವಿದೆ. 11ನೇ ಪಂಚವಾರ್ಷಿಕ ಯೋಜನೆ ಅಂತ್ಯಗೊಳ್ಳುವ ಹೊತ್ತಿಗೆ 1 ಲಕ್ಷ ಹೆಚ್ಚುವರಿ ವಿದ್ಯುತ್‌ ಉತ್ಪಾದನೆಗೆ ನಾಲ್ಕು ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಬೇಕು ಎಂದು ಪಾಟೀಲರು ತಮ್ಮ ಲೆಕ್ಕಾಚಾರ ಮುಂದಿಟ್ಟರು.

ದೇಶದಲ್ಲಿ ಇನ್ನೂ ಎಲ್ಲ ಹಳ್ಳಿಗಳಿಗೆ ವಿದ್ಯುತ್‌ ತಲುಪಿಲ್ಲ. ಇನ್ನೂ ವಿದ್ಯುತ್‌ ಕಾಣದ ಸುಮಾರು 80 ಸಾವಿರ ಹಳ್ಳಿಗಳು ದೇಶದಲ್ಲಿವೆ ಎಂದು ಪಾಟೀಲ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X