ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕ ವಸಂತ ಆಸ್ನೋಟಿಕರ್‌ ಹಂತಕ ಪೊಲೀಸರ ಗುಂಡಿಗೆ ಬಲಿ

By Staff
|
Google Oneindia Kannada News

ಮುಂಬಯಿ : ಕಾರವಾರದ ಶಾಸಕ ವಸಂತ ಆಸ್ನೋಟಿಕರ್‌ ಅವರ ಹತ್ಯೆಯ ಪ್ರಮುಖ ಆರೋಪಿ ಟೋನಿ ಅಲಿಯಾಸ್‌ ಆಂಟೋನಿ ಮುಂಬಯಿ ಪೊಲೀಸರ ಗುಂಡಿಗೆ ಗುರುವಾರ ಬಲಿಯಾಗಿದ್ದಾನೆ.

1999ರ ಫೆಬ್ರವರಿ 19ರ ರಾತ್ರಿ ತಮ್ಮ ಮಗಳ ಮದುವೆಯ ಆರತಕ್ಷತೆಯ ಸಂದರ್ಭದಲ್ಲಿ ಓಡಾಡುತ್ತಿದ್ದ ಆಸ್ನೋಟಿಕರ್‌ ಅವರ ಮೇಲೆ ದ್ವಿಚಕ್ರವಾಹನದಲ್ಲಿ ಬಂದ ಹಂತಕರಿಬ್ಬರು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಈ ಪ್ರಕರಣ ಹಲವು ರೀತಿಯ ತಿರುವುಗಳನ್ನು ಪಡೆದಿತ್ತು.

ಆಗ ಹಂತಕರ ಪತ್ತೆಗೆ ಡಿ.ಐ.ಜಿ. ಜ್ಯೋತಿಪ್ರಕಾಶ್‌ ಮಿರ್ಜಿ ಅವರ ನೇತೃತ್ವದ ವಿಶೇಷ ತಂಡ ರಚಿಸಲಾಗಿತ್ತು. ಕೊಲೆಗಾರರನ್ನು ಹಿಡಿಯಲು ಪೊಲೀಸರು ವ್ಯಾಪಕ ಜಾಲ ಬೀಸಿದ್ದರು. ಈ ತನಿಖೆಯಲ್ಲಿ ಮುಂಬಯಿಯ ಟೋನಿಯನ್ನು ಆಸ್ನೋಟಿಕರ್‌ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿತ್ತು.

ಗುರುವಾರ ಮುಂಬಯಿ ಪೊಲೀಸರು ಟೋನಿಯ ಬಂಧನಕ್ಕೆ ತಂತ್ರ ರೂಪಿಸಿ ಬೆನ್ನಟ್ಟಿದಾಗ, ಟೋನಿ ಪೊಲೀಸರ ಮೇಲೆ ಗುಂಡಿನ ಮಳೆಗರೆದ. ಆತ್ಮರಕ್ಷಣೆಗೆ ಪೊಲೀಸರು ಪ್ರತಿದಾಳಿ ನಡೆಸಿದರು. ಈ ಗುಂಡಿನ ಚಕಮಕಿಯಲ್ಲಿ ಟೋನಿ ಹತನಾದ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬಯಿಯ ಟೋನಿ ಅಲಿಯಾಸ್‌ ಆಂಟೋನಿ ಛೋಟಾ ರಾಜನ್‌ನ ಸಹಚರರಲ್ಲೊಬ್ಬ ಎಂದು ಪೊಲೀಸರು ಹೇಳಿದ್ದಾರೆ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X