Get Updates
Get notified of breaking news, exclusive insights, and must-see stories!

ಶೇ.7ರಷ್ಟು ಭಾರತೀಯರಿಗೆ ಅಡುಗೆಮನೆಯಲ್ಲಿ ಸರಸ ಆಡುವಾಸೆ!

ಮುಂಬಯಿ : ಜಾಗತೀಕರಣದ ಬಿಂಬ ಮಾರುಕಟ್ಟೆ ಸರ್ವೆ. ಸೋಪಿನಿಂದ ಹಿಡಿದು ಬಳಸುವ ಆತ್ತರು ಯಾವುದು, ಅದರಲ್ಲಿ ಪುರುಷರ ಮೆಚ್ಚು ಯಾವುದು, ಹೆಂಗಳೆಯರಿಗೆ ಯಾವುದು ಪ್ರಿಯ ಎಂಬ ತನಕ ಸಮೀಕ್ಷೆ. ತಮ್ಮ ಉತ್ಪನ್ನದ ಬಿಕರಿ ಚುರುಕುಗೊಳಿಸುವ ಹುಮ್ಮಸ್ಸು. ಕೆಲವೊಮ್ಮೆ ಸರ್ವೆ ನಂತರ ಗೊತ್ತಾಗುತ್ತದೆ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನ ಠುಸ್ಸು. ಡ್ಯೂರೆಕ್ಸ್‌ ಎಂಬ ಕಾಂಡೋಮ್‌ ಕಂಪನಿ ಹೀಗೊಂದು ಸರ್ವೆ ನಡೆಸಿದೆ. ಸಂಕ್ಷಿಪ್ತವಾಗಿ ಇದನ್ನು ಸೆಕ್ಸ್‌ ಸರ್ವೆ ಎನ್ನಬಹುದು. ಇದರ ಪ್ರಕಾರ ಭಾರತೀಯ ಪುರುಷರ ಪೈಕಿ ಕೇವಲ ಪ್ರತಿಶತ 10 ಮಂದಿಗೆ ಮಾತ್ರ ಕಾಂಡೋಮ್‌ ಉಪಯೋಗಿಸುವುದು ಇಷ್ಟ !

ಸಮೀಕ್ಷೆಯ ಕುತೂಹಲಕಾರಿ ಅಂಶಗಳು ಇಂತಿವೆ...

  • ವರ್ಷದಲ್ಲಿ ಭಾರತೀಯರು ಸರಾಸರಿ 78 ಬಾರಿ ಸಂಭೋಗ ಕ್ರಿಯೆಯಲ್ಲಿ ತೊಡಗುತ್ತಾರೆ. ಇದು ಹಾಂಗ್‌ಕಾಂಗಿಗಳು ಮತ್ತು ಚೀನೀಯರಿಗಿಂತ ಹೆಚ್ಚು. ಅಮೆರಿಕನ್ನರು(124) ಮತ್ತು ಬ್ರಿಟಿಷರಿ (107) ಗಿಂತ ಕಡಿಮೆ.
  • ಪ್ರತಿಶತ 77 ಭಾರತೀಯರಿಗೆ ಒಬ್ಬ ಲೈಂಗಿಕ ಸಂಗಾತಿ ಸಾಕು. ಕೇವಲ ಶೇ.11 ಅಮೆರಿಕನ್ನರು ಮತ್ತು ಶೇ.13 ಬ್ರಿಟಿಷರು ಈ ಮಾತನ್ನು ಹೇಳಬಹುದು.
  • ಶೇ. 27 ಭಾರತೀಯರು ಏಡ್ಸ್‌/ಎಚ್‌ಐವಿ ರಕ್ಷಣೆಯ ಮಾರ್ಗಗಳನ್ನು ಲೈಂಗಿಕ ಕ್ರಿಯೆಯಲ್ಲಿ ಅನುಸರಿಸುವುದಿಲ್ಲ. 10 ಭಾರತೀಯರ ಪೈಕಿ 7 ಮಂದಿಗೆ ಒಂದಲ್ಲ ಒಂದು ರೀತಿಯ ಲೈಂಗಿಕ ತೊಂದರೆಯಿದೆ. ಈ ಪೈಕಿ ಸಮಸ್ಯೆ ನೀಗಿಕೊಳ್ಳುವ ಗೊಡವೆಗೆ ಹೋಗುವವರು ಒಬ್ಬ ಅಥವಾ ಇಬ್ಬರು ಮಾತ್ರ.
  • ಭಾರತೀಯರಲ್ಲಿ ಮೂರನೇ ಒಂದರಷ್ಟು ಜನಕ್ಕೆ ಕಡಲ ತಡಿಯಲ್ಲಿ ಸಂಗಾತಿ ಜೊತೆ ಮಲಗುವಾಸೆ. 7 ಪ್ರತಿಶತ ಭಾರತೀಯರಿಗೆ ಅಡುಗೆಮನೆಯಲ್ಲಿ ಚೆಲ್ಲಾಟ ಆಡುವಾಸೆ.
  • ಪ್ರತಿಶತ 26 ಮಂದಿ ಭಾರತೀಯರು ಸಂಗಾತಿಯಲ್ಲಿ ದೈಹಿಕ ಸೌಂದರ್ಯ ಬಯಸುತ್ತಾರೆ. ಪ್ರತಿಶತ 15 ಜನಕ್ಕೆ ಸ್ಟೇಟಸ್‌, ಉದ್ಯೋಗ ಮುಖ್ಯ. ಶೇ.11 ಮಂದಿಗೆ ಚೆನ್ನಾಗಿ ಬದುಕಬಲ್ಲಷ್ಟು ಪಗಾರ ಗಿಟ್ಟಿಸುವವರು ಸಾಕು.
ಅಂದಹಾಗೆ, 28 ದೇಶಗಳಲ್ಲಿ ಸಮೀಕ್ಷೆ ನಡೆಸಿದ ನಂತರ ಡ್ಯೂರೆಕ್ಸ್‌ ಈ ಅಂಶಗಳನ್ನು ಪ್ರಕಟಿಸಿದೆ. ಅದು ಹೇಳುವಂತೆ ಭಾರತೀಯರಲ್ಲಿ ಲೈಂಗಿಕತೆಯ ಬಗ್ಗೆ ಹುಚ್ಚು ಆಸಕ್ತಿ ಈಗಲೂ ಇದೆ. ಆದರೆ ಅದರ ಜ್ಞಾನ ಸಾಕಷ್ಟಿಲ್ಲ. ಗೆಳೆಯರು ಅಥವಾ ಆಪ್ತರ ಮಾತಿಗೆ ಕಿವಿಗೊಡುತ್ತಾರೆ. ಈಗಲೂ ನಮ್ಮ ಜನ ಮಡಿವಂತರು !

(ಏಜೆನ್ಸೀಸ್‌)

ಮುಖಪುಟ / ಲೋಕೋಭಿನ್ನರುಚಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+