ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡವರನ್ನು ಗುರುತಿಸಲು ರಾಜ್ಯಗಳಿಗೆಸುಪ್ರೀಂ ಕೋರ್ಟ್‌ಗಡುವು

By Staff
|
Google Oneindia Kannada News

ನವದೆಹಲಿ : ಬಡತನ ನಿವಾರಣೆಯ ಹಿನ್ನೆಲೆಯಲ್ಲಿ ಬಡತನ ರೇಖೆಗಿಂತ ಕೆಳ ಗಿರುವವರನ್ನು ಗುರುತಿಸಿ, ಅವರಿಗೆ ನೆರವು ನೀಡಲು ವ್ಯವಸ್ಥೆ ಮಾಡುವಂತೆ ಎಲ್ಲಾ ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಮುಂದಿನ ಜನವರಿಯವರೆಗೆ ಗಡುವು ನೀಡಿದೆ.

ಕೇಂದ್ರ ಸರಕಾರದ ಅಂತ್ಯೋದಯ ಅನ್ನ ಯೋಜನೆ, ರಾಷ್ಟ್ರೀಯ ವಯಸ್ಕರ ಪಿಂಚಣಿ, ಅನ್ನ ಪೂರ್ಣ ಯೋಜನೆ, ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ , ರಾಷ್ಟ್ರೀಯ ತಾಯ್ತನ ಯೋಜನೆ , ರಾಷ್ಟ್ರೀಯ ಕುಟುಂಬ ಲಾಭ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಈ ಯೋಜನೆಯಿಂದ ಉಪಯೋಗವಾಗುವಂತೆ ವ್ಯವಸ್ಥೆ ಕಲ್ಪಿಸಲು, ಕೋರ್ಟ್‌ ರಾಜ್ಯಗಳಿಗೆ ಸೂಚಿಸಿದೆ.

ನಾಗರಿಕ ಹಕ್ಕುಗಳಿಗಾಗಿ ಇರುವ ಸಾರ್ವಜನಿಕ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆಯ ಬಳಿಕ ಈ ನಿರ್ದೇಶನವನ್ನು ನೀಡಲಾಗಿದೆ. ಭಾರತೀಯ ಆಹಾರ ನಿಗಮದಲ್ಲಿ ಆಹಾರ ಧಾನ್ಯ ತುಂಬಿ ತುಳುಕುತ್ತಿದ್ದರೂ ದೇಶದಲ್ಲಿ ಹಸಿವಿನಿಂದ ಸಾಯುತ್ತಿರುವ ವರದಿಗಳು ಬರುತ್ತಿವೆ. ಬಡವರ ಕಲ್ಯಾಣಕ್ಕಾಗಿರುವ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಮತ್ತು ಸಮರ್ಥ ವ್ಯವಸ್ಥೆಯ ವೈಫಲ್ಯದಿಂದ ಹೀಗಾಗುತ್ತಿರುವುದಾಗಿ ಸಂಘಟನೆಯು ತನ್ನ ಅರ್ಜಿಯಲ್ಲಿ ಆರೋಪಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X