ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ 2, 2002ರಿಂದ ಕರೋಡ್‌ಪತಿ ಆಟಕ್ಕೆ ಅಲ್ಪವಿರಾಮ

By Staff
|
Google Oneindia Kannada News

ಬೆಂಗಳೂರು : ಮೂರುನೂರು ಕಂತು. 3000 ಸ್ಪರ್ಧಿಗಳು. ಈ ಪೈಕಿ ಹಾಟ್‌ಸೀಟ್‌ ಏರಿದವರು 500. ಇವರೆಲ್ಲಾ ಗೆದ್ದ ಒಟ್ಟು ಬಹುಮಾನ 26 ಕೋಟಿ ರುಪಾಯಿ. ಹಾಟ್‌ಸೀಟಿನ ಆಸೆ ಹೊತ್ತು ಫೋನಿನ ನಂಬರ್‌ ತಿರುಗಿಸಿದವರು 9 ಕೋಟಿ. ಸ್ಟುಡಿಯೋದಲ್ಲಿ ಆಟದ ಮಜಾ ಅನುಭವಿಸಿದ್ದು 60 ಸಾವಿರ ಮಂದಿ. ಕ್ವಿಜ್‌ ಮಾಸ್ಟರ್‌ ಸಿದ್ದಾರ್ಥ ಬಸು, ಬಿಗ್‌ ಬಿಯನ್ನು ಮುಂದಿಟ್ಟು ನಡೆಸಿದ ಯಶಸ್ವಿ ಕ್ವಿಜ್‌- ದುಡ್ಡಿನಾಟ ಕೌನ್‌ ಬನೇಗಾ ಕರೋಡ್‌ಪತಿಗೆ ಮುಂದಿನ ವರ್ಷ ಜನವರಿ 2ರಿಂದ ಅಲ್ಪವಿರಾಮ.

ಹೊಸ ವರ್ಷದ ದಿನ ಕಡೇ ಬಾರಿಗೆ ಬಿಗ್‌ ಬೀಯ ‘ಆರ್‌ ಯೂ ಶೂರ್‌’, ‘ಕಾನ್ಫಿಡೆಂಟ್‌?’, ‘ಲಾಕ್‌ ಕಿಯಾ ಜಾಯ್‌...’ ಮಾತು ಕೇಳಬಹುದು. ಸ್ಟಾರ್‌ ಟಿವಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸಮೀರ್‌ ನಾಯರ್‌ ಹೇಳುವಂತೆ ಈ ಜನಪ್ರಿಯ ಕಾರ್ಯಕ್ರಮದ ನೋಡುಗರ ಸಂಖ್ಯೆಯನ್ನು ಉಳಿಸಿಕೊಳ್ಳುವ ತಂತ್ರ ಇದು. ಐದಾರು ತಿಂಗಳ ನಂತರ ಷೋ ಮತ್ತೆ ಶುರು. ಹೊಸ ರೂಪು. ಇನ್ನೂ ದೊಡ್ಡ ಬಹುಮಾನದ ಮೊತ್ತ. ಅಮಿತಾಭ್‌ ಅವರೇ ನಿರ್ವಹಿಸುವರು. 2 ಕೋಟಿ ರುಪಾಯಿಯಷ್ಟು ಬಹುಮಾನದ ಮೊತ್ತ ನಿಗದಿ ಪಡಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಆದರೆ ಇನ್ನೂ ಬಹುಮಾನದ ಮೊತ್ತ ಎಷ್ಟಿರಬೇಕೆಂಬುದರ ಅಂತಿಮ ನಿರ್ಧಾರ ಆಗಿಲ್ಲ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X