ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಸಿ ತಾಕೀತನ್ನು ಕಡೆಗಣಿಸಿದ ಬಿಸಿಸಿಐ, ಮೊಹಾಲಿ ಟೆಸ್ಟ್‌ಗೆ ಶೆವಾಗ್‌

By Staff
|
Google Oneindia Kannada News

ಕೋಲ್ಕ್ಝತಾ : ಒಂದು ಪಂದ್ಯದ ನಿಷೇಧಕ್ಕೊಳಗಾಗಿರುವ ಭಾರತದ ಉದಯೋನ್ಮುಖ ಬ್ಯಾಟ್ಸ್‌ಮನ್‌ ವೀರೇಂದ್ರ ಶೆವಾಗ್‌ ಹೆಸರು ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಆಯ್ಕೆ ಮಾಡಿರುವ 14 ಕ್ರಿಕೆಟಿಗರ ಪಟ್ಟಿಯಲ್ಲಿದೆ.

ಇಂಗ್ಲೆಂಡ್‌ನ ಮೈಕ್‌ ಡೆನ್ನಿಸ್‌ ಅವರ ಕೆಂಗಣ್ಣಿಗೆ ತುತ್ತಾದ ಭಾರತೀಯದ 6 ಕ್ರಿಕೆಟಿಗರ ಪೈಕಿ ಶೆವಾಗ್‌ ಕೂಡ ಒಬ್ಬರು. ಒಂದು ಪಂದ್ಯದಿಂದ ಇವರಿಗೆ ನಿಷೇಧ ಹೇರಲಾಗಿದೆ. ನೆಲಕ್ಕೆ ಪುಟಿದೆದ್ದ ಚೆಂಡನ್ನು ಕೈಗೆತ್ತಿಕೊಂಡು ಕ್ಯಾಚ್‌ಗೆ ಮನವಿ ಮಾಡಿದರೆಂಬ ಕಾರಣಕ್ಕೆ ಈ ಶಿಕ್ಷೆ. ದಕ್ಷಿಣ ಆಫ್ರಿಕ- ಭಾರತದ ನಡುವೆ ಮುಗಿದ ಮೂರನೇ ಟೆಸ್ಟ್‌ನಲ್ಲಿ ಶೆವಾಗ್‌ ಆಡಲಿಲ್ಲ. ಆದರೆ ಅದು ಅನಧಿಕೃತ ಪಂದ್ಯ ಎಂದು ಘೋಷಿತವಾಗಿದೆ. ಹೀಗಾಗಿ ಶೆವಾಗ್‌ ಅವರ ಮೇಲಿನ ನಿಷೇಧ ಇನ್ನೂ ಮುಗಿದಿಲ್ಲ ಎಂದು ಐಸಿಸಿ ಹೇಳಿದೆ. ಆತನನ್ನು ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಆಡಿಸುವ ನಿರ್ಧಾರವನ್ನು ಬರುವ ಶುಕ್ರವಾರ ಸಂಜೆಯಾಳಗೆ ಕೈಗೊಳ್ಳುವಂತೆ ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್‌ ಆಯ್ಕೆ ಸಮಿತಿ ನಿರ್ಧಾರ ಸಾಕಷ್ಟು ಟೀಕೆಗೆ ಗುರಿಯಾಗುವ ನಿರೀಕ್ಷೆಯಿದೆ. ಆಟಗಾರರನ್ನು ಅವರ ಸಾಮರ್ಥ್ಯದ ಆಧಾರದ ಮೇಲೆ ಆರಿಸಲಾಗಿದೆ. ಇದರಲ್ಲಿ ಬೇರೆ ಯಾವುದೇ ಉದ್ದೇಶ ಇಲ್ಲ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಚಂದು ಬೋರ್ಡೆ ಬುಧವಾರ ಸುದ್ದಿಗಾರರಿಗೆ ಹೇಳಿದರು.

ವೇಗಿಗಳ ದಂಡಿಗೇ ಖೊಕ್‌ : ತಂಡದ ಆಯ್ಕೆಯಲ್ಲಿ ಬೆಚ್ಚಿ ಬೀಳಿಸಿರುವ ಸಂಗತಿಯೆಂದರೆ, ಅಜಿತ್‌ ಅಗರ್ಕರ್‌, ಆಶಿಶ್‌ ನೆಹ್ರ, ಜಹೀರ್‌ ಖಾನ್‌, ವೆಂಕಟೇಶ್‌ ಪ್ರಸಾದ್‌... ಇವರ್ಯಾರ ಹೆಸರುಗಳೂ ಇಲ್ಲ. ಗಾಯಾಳು ಎಂಬ ಕಾರಣಕ್ಕೆ ಶ್ರೀನಾಥ್‌ ಹೆಸರನ್ನು ಪರಿಗಣಿಸಿಲ್ಲ. ಈ ವೇಗಿಗಳ ಬದಲಿಗೆ ಕೇರಳದ ಟೀನು ಯಾಹಾನ್ನನ್‌, ರೈಲ್ವೇಸ್‌ನ ಸಂಜಯ್‌ ಬಂಗಾರ್‌ ಹಾಗೂ ಮಹಾರಾಷ್ಟ್ರದ ಇಕ್ಬಾಲ್‌ ಸಿದ್ದಿಕಿಗೆ ಅವಕಾಶ ನೀಡಲಾಗಿದೆ.

ತಂಡ ಹೀಗಿದೆ...
ಸೌರವ್‌ ಗಂಗೂಲಿ (ನಾಯಕ), ರಾಹುಲ್‌ ದ್ರಾವಿಡ್‌(ಉಪ ನಾಯಕ), ಸಚಿನ್‌ ತೆಂಡೂಲ್ಕರ್‌, ವಿವಿಎಸ್‌ ಲಕ್ಷ್ಮಣ್‌, ಕಾನರ್‌ ವಿಲಿಯಮ್ಸ್‌, ಎಸ್‌.ಎಸ್‌.ದಾಸ್‌, ವೀರೇಂದ್ರ ಶೆವಾಗ್‌, ದೀಪ್‌ದಾಸ್‌ ಗುಪ್ತಾ (ವಿಕೆಟ್‌ ಕೀಪರ್‌), ಅನಿಲ್‌ ಕುಂಬ್ಳೆ, ಹರ್ಭಜನ್‌ ಸಿಂಗ್‌, ಟಿನ್ನು ಯಾಹಾನ್ನನ್‌, ಇಕ್ಬಾಲ್‌ ಸಿದ್ದಿಕಿ, ಶರಣ್‌ದೀಪ್‌ ಸಿಂಗ್‌, ಸಂಜಯ್‌ ಬಂಗಾರ್‌.

(ಏಜೆನ್ಸೀಸ್‌)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X