ಪಂಜೆ ಗ್ರಾಮದ ಬೋರ್ವೆಲ್ನಲ್ಲಿ ಕೆಂಪು ನೀರು, ಗ್ರಾಮಸ್ಥರು ಗಲಿಬಿಲಿ
ಮಂಗಳೂರು : ಕರಾವಳಿಯ ಹಲವು ಕಡೆಗಳಲ್ಲಿ ಬೋರ್ವೆಲ್ ಮೂಲಕ ಸಂಗ್ರಹಿಸಿದ ನೀರು ನೋಡುವುದಕ್ಕೆ ಸ್ವಚ್ಛವಾಗಿ ಸ್ಫಟಿಕದಂತೆ ಕಂಡರೂ ಬಿಸಿ ಮಾಡಿದ ತಕ್ಷಣ ಕೆಂಪು ಬಣ್ಣಕ್ಕೆ ತಿರುಗುತ್ತಿರುವುದಾಗಿ ವರದಿಯಾಗಿದೆ.
ಅಕ್ಕಿ ತೊಳೆದು ನೀರು ಬೆರೆಸಿ ಒಲೆ ಮೇಲಿಟ್ಟರೆ ಹತ್ತು ನಿಮಿಷ ವಾಗುತ್ತಲೇ ಆ ನೀರು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಅನ್ನವೂ ಕೆಂಪು ಬಣ್ಣದ್ದಾಗಿರುತ್ತದೆ. ಬಣ್ಣ ಮಾತ್ರವಲ್ಲ, ಹೀಗೆ ಅಕ್ಕಿ ಬೆಂದು ಅನ್ನವಾಗುತ್ತಲೇ ಕೊಳೆತ ವಾಸನೆಯೂ ಬರಲಾರಂಭಿಸುತ್ತದೆ. ಪಾತ್ರೆಯ ಮೇಲ್ಭಾಗದಲ್ಲಿ ತೆಳ್ಳನೆಯ ಎಣ್ಣೆಯ ಪೊರೆಯೂ ನಿಂತಿರುತ್ತದೆ ಎಂದು ಪಂಜೆ ಗ್ರಾಮದ ನಿವಾಸಿಗಳು ಹೇಳುತ್ತಾರೆ.
ಇಲ್ಲಿನ ದೇವಸ್ಯ ಪಂಚಾಯತ್ನ ಅಂಗನವಾಡಿ ಮಕ್ಕಳು ಕೂಡ ಇಂತಹುದೇ ಬೋರ್ವೆಲ್ ನೀರನ್ನು ಬಳಸುತ್ತಿದ್ದು, ಕೆಲವು ಮಕ್ಕಳಿಗೆ ಚರ್ಮದ ಕಾಯಿಲೆಗಳೂ ಅಂಟಿಕೊಂಡಿರುವುದಾಗಿ ತಿಳಿದುಬಂದಿದೆ. ಸುಮಾರು ಶೇ 70ಕ್ಕೂ ಹೆಚ್ಚು ಮಂದಿ ದೇವಸ್ಯದ ನಿವಾಸಿಗಳು ಬೋರ್ವೆಲ್ ನೀರನ್ನೇ ಅವಲಂಬಿಲಸಿದ್ದಾರೆ. ಸ್ಥಳೀಯ ಗಡಿನಾಡ ಪ್ರಗತಿ ಯುವಕ ಮಂಡಲದ ಸದಸ್ಯರು ಕೆಂಪು ನೀರಿನ ಈ ಸಮಸ್ಯೆಯ ಬಗ್ಗೆ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಪಂಜೆಯ ಪ್ರಾಥಮಿಕ ಆರೋಗ್ಯ ಕೇಂದ್ರವು ಕೆಂಪು ನೀರಾಗಿ ಬದಲಾಗುವ ಬೋರ್ವೆಲ್ ನೀರಿನ ಸ್ಯಾಂಪಲ್ನ್ನು ಪರೀಕ್ಷೆಗಾಗಿ ಕಳುಹಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications