Get Updates
Get notified of breaking news, exclusive insights, and must-see stories!

‘ಭಾರೀ ಜನರನ್ನು ಕೊಲ್ಲುವ ಅಸ್ತ್ರ ತಯಾರಿಕೆಯಲ್ಲಿ ಒಸಾಮ’

ಬೆಂಗಳೂರು : ಒಮ್ಮೆಗೇ ಸಹಸ್ರಾರು ಜನರನ್ನು ಕೊಂದು ಹಾಕಬಲ್ಲ ಶಸ್ತ್ರಾಸ್ತದ ಸಂಶೋಧನೆಯಲ್ಲಿ ಅಂತರರಾಷ್ಟ್ರೀಯ ಪಾತಕಿ ಒಸಾಮ ಬಿನ್‌ ಲ್ಯಾಡೆನ್‌ ತೊಡಗಿದ್ದಾನೆ ಎಂದು ಅಮೆರಿಕಾ ಹೇಳಿದೆ.

ಲ್ಯಾಡೆನ್‌ನ ಸಹಚರ ವಿಜ್ಞಾನಿಗಳು ರಾಸಾಯನಿಕ, ಜೈವಿಕ ಮತ್ತು ಅಣ್ವಸ್ತ್ರ ಸಂಶೋಧನೆಯಲ್ಲಿ ತೊಡಗಿರುವ ಆಫ್ಘಾನಿಸ್ತಾನದ 40 ಜಾಗೆಗಳನ್ನು ಪತ್ತೆ ಮಾಡಿರುವುದಾಗಿ ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಡೊನಾಲ್ಡ್‌ ರಮ್ಸ್‌ಫೀಲ್ಡ್‌ ಬುಧವಾರ ತಿಳಿಸಿದ್ದಾರೆ. ಆಫ್ಘಾನಿಸ್ತಾನದಲ್ಲಿ ಯುದ್ಧ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿರುವ ಕೇಂದ್ರ ಕಮಾಂಡ್‌ ಚೀಫ್‌ ಜನರಲ್‌ ಟಾಮಿ ಫ್ರಾಂಕ್ಸ್‌ ಈ ಹೇಳಿಕೆಯನ್ನು ಅನುಮೋದಿಸಿದ್ದಾರೆ.

ಒಟ್ಟಿನಲ್ಲಿ ಒಸಾಮ ಸುಮ್ಮನೆ ಕುಳಿತಿಲ್ಲ. ಅವನು ಭಾರೀ ಸಂಖ್ಯೆಯ ಜನರನ್ನು ಕೊಂದು ಹಾಕಬಲ್ಲ ಅಸ್ತ್ರ ತಯಾರಿಸುತ್ತಿದ್ದಾನೋ ಅಥವಾ ಕೀಟನಾಶಕಗಳನ್ನು ಸಿದ್ಧ ಪಡಿಸುತ್ತಿದ್ದಾನೋ ಎಂಬುದನ್ನು ತಿಳಿಯಬೇಕಿದೆ. ಅದು ಪಕ್ಕಾ ಆದ ನಂತರವೇ ಅಧ್ಯಕ್ಷರಿಗೆ ಈ ಬಗ್ಗೆ ವರದಿ ಸಲ್ಲಿಸುತ್ತೇವೆ ಎಂದು ಫ್ರಾಂಕ್ಸ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ‘ಆಪರೇಷನ್‌ ಎಂಡ್ಯೂರಿಂಗ್‌ ಫ್ರೀಡಂ’

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+