• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನನ್ನನ್ನು ತಪ್ಪು ತಿಳಿದಿದ್ದಾರೆ

By Staff
|

(ನಮ್ಮ ಪ್ರತಿನಿಧಿಯಿಂದ)

ನವದೆಹಲಿ : ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಸಚಿನ್‌ ಬಾಲ್‌ ಟ್ಯಾಂಪರ್‌ ಮಾಡಿದ್ದರು ಅಂತ ನಾನು ಹೇಳೇ ಇಲ್ಲ ಎಂದು ಬ್ರಿಟನ್‌ ಮ್ಯಾಚ್‌ ರೆಫರಿ ಮೈಕ್‌ ಡೆನ್ನಿಸ್‌ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.

ದಿ ಹಿಂದೂ ಪತ್ರಿಕೆಗೆ ಅವರು ಕೊಟ್ಟಿರುವ ಪ್ರತಿಕ್ರಿಯೆ ಹೀಗಿದೆ-

ಚೆಂಡಿನ ಕಸ ತೆಗೆಯುವಾಗ ಅಂಪೈರ್‌ ಅನುಮತಿಯನ್ನು ಸಚಿನ್‌ ಪಡೆಯಲಿಲ್ಲ ಎಂಬ ಕಾರಣಕ್ಕೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡೆ. ಅದನ್ನು ಬಾಲ್‌ ಟ್ಯಾಂಪರಿಂಗ್‌ ಅಂತ ಬಣ್ಣಿಸಲಾಗಿದೆ. ಪ್ರಾಯಶಃ ಚೆಂಡಿಗೆ ಸಂಬಂಧಿಸಿದಂತೆ ಬಳಸಬಲ್ಲ ಇನ್‌ಸ್ಟಂಟ್‌ ಪದ ಇದು ಅನಿಸುತ್ತದೆ.

ಡೆನ್ನಿಸ್‌ ಅವರ ಶಿಸ್ತು ಕ್ರಮದ ಬಗ್ಗೆ ಅವರ ವರದಿ ಉಲ್ಲೇಖಿಸಿ ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಪ್ರಕಟಿಸಿರುವಂತೆ, ತೆಂಡೂಲ್ಕರ್‌ ವಿರುದ್ಧ ಶಿಸ್ತು ಕ್ರಮ ಕೆಗೊಳ್ಳಲು ಕಾರಣ- "alleged interference with the match ball, thus changing its condition". ಅಲ್ಲಿಗೆ ಇದು ಬಾಲ್‌ ಟ್ಯಾಂಪರಿಂಗ್‌ ಅಲ್ಲ ಎಂಬುದು ಖಚಿತವಾದಂತಾಯಿತು.

ಕೊನೆಗೂ ಡೆನ್ನಿಸ್‌ ತಡವಾಗಿ ಬಾಯಿ ಬಿಟ್ಟಿದ್ದಾರೆ. ಜೆಫ್ರಿ ಬಾಯ್ಕಾಟ್‌ ಮತ್ತು ನವಜೋತ್‌ ಸಿಂಗ್‌ ಸಿಧು ದಕ್ಷಿಣ ಆಫ್ರಿಕದಲ್ಲಿ ಮುಗಿದ ಮೂರನೇ ಟೆಸ್ಟ್‌ನ ವೀಕ್ಷಕ ವಿವರಣೆ ಸಮಯದಲ್ಲಿ ಸಚಿನ್‌ ವಿಷಯದಲ್ಲಿ ಸಾಕಷ್ಟು ವಾಗ್ಯುದ್ಧ ನಡೆಸಿದ್ದರು. ಡೆನ್ನಿಸ್‌ ಸುಮ್ಮಗಿದ್ದರು. ಮೂರನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದ ರೆಫ್ರಿ ಹುದ್ದೆಯಿಂದ ಅವರಿಗೆ ಖೊಕ್‌ ಕೊಟ್ಟಾಗಲೂ ತುಟಿ ಪಿಟಿಕ್‌ ಅನ್ನಲಿಲ್ಲ. ಈ ಹೇಳಿಕೆಯನ್ನು ಆಗಲೇ ಪ್ರಕಟಿಸಿದ್ದರೆ ಈ ಪರಿಯ ವಾದ- ವಿವಾದಗಳು ನಡೆಯುತ್ತಲೇ ಇರಲಿಲ್ಲವೇನೋ. ಅಂದಹಾಗೆ, ಸಚಿನ್‌ಗೆ ಪಂದ್ಯದ 75ರಷ್ಟು ಫೀಸಿನ ದಂಡ ಹಾಗೂ ಒಂದು ಪಂದ್ಯದ ಅಮಾನತನ್ನು ಹೇರಲಾಗಿದೆ.

ಕ್ರಿಕೆಟ್‌ ಅಭಿಮಾನಿಗಳು ‘ಡೆನ್ನಿಸ್‌ ದಿ ಮೆನೇಸ್‌’ ಅಂತ ತೀರ್ಮಾನಿಸಿ ಸಾಕಷ್ಟು ಕಿಡಿ ಹಾರಿಸಿದ್ದಾರೆ. ನಮೂನೆಗೆ ನಮ್ಮ ಮೆಸೇಜ್‌ ಬೋರ್ಡಿಗೆ ಭೇಟಿ ಕೊಡಿ.

ಐಸಿಸಿ ಬಿಡುಗಡೆ ಮಾಡಿರುವ ಸಚಿನ್‌ ವಿರುದ್ಧದ ಡೆನ್ನಿಸ್‌ ಶಿಸ್ತು ಕ್ರಮದ ಬಗೆಗಿನ ಹೇಳಿಕೆಯನ್ನು ಯಥಾವತ್ತಾಗಿ ಕೊಡುತ್ತಿದ್ದೇವೆ. ಓದಿಬಿಡಿ...

"Mike Denness, the ICC match referee appointed for the Castle Lager/MTN

Test matches of the Summer Spice Series between South Africa and India, held four separate hearings with members of the Indian team yesterday (November 20) and made the following findings:

1. Sachin Tendulkar: For alleged interference with the match ball, thus changing its condition. Match Referee Decision: By acting on the match ball, Mr Tendulkar brought the game into disrepute (ICC Players and Team Officials Code No 2) and has been fined 75 per cent of his match fee, plus a one-Test Match ban.

The ban will be suspended until the last day of December 2001.

Players and Team Officials Code No 2: "Players and/or team officials shall at no time engage in conduct unbecoming to their status which could bring them or the game of cricket into disrepute."

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more