ಅಮೆರಿಕೆ ವಿಜ್ಞಾನಿಗಳಿಂದ ಮಾನವ ಭ್ರೂಣದ ಕ್ಲೋನಿಂಗ್
ವೊರ್ಸೆಸ್ಟರ್ : ಮಾನವ ಭ್ರೂಣವನ್ನು ಪ್ರಪ್ರಥಮ ಬಾರಿಗೆ ಕ್ಲೋನ್ ಮಾಡಿದ್ದೇವೆ ಎಂದು ಅಮೆರಿಕೆ ಕಂಪನಿಯ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.
ಪರ್ಕಿನ್ಸನ್ ಕಾಯಿಲೆ ಸೇರಿದಂತೆ ವಯಸ್ಸಿಗೆ ಸಂಬಂಧಿಸಿದ ಬೇನೆಗಳ ನಿವಾರಣೆಗೆ ಈ ರೀತಿ ಕ್ಲೋನ್ ಮಾಡಿದ ಭ್ರೂಣಗಳು ಉಪಯೋಗಕ್ಕೆ ಬರುತ್ತವೆ ಎಂದು ಮೆಸಾಚ್ಯುಸೆಟ್ಸ್ನ ವೊರ್ಸೆಸ್ಟರ್ನಲ್ಲಿರುವ ಅಡ್ವಾನ್ಸ್ಡ್ ಸೆಲ್ ಟೆಕ್ನಾಲಜಿ ಇನ್ಕಾರ್ಪೊರೇಷನ್ ಹೇಳಿದೆ. ಕ್ಲೋನಿಂಗ್ ತಂತ್ರಜ್ಞಾನದಿಂದ ಸಿದ್ಧಪಡಿಸಿದ ಈ ಚೆಂಡಿನಾಕಾರದ ಕೋಶಗಳು ಕಾಂಡ ಕೋಶ (ಸ್ಟೆಮ್ ಸೆಲ್)ಗಳಾಗಿ ಕೆಲಸ ಮಾಡಬಲ್ಲವು. ಮಾನವ ದೇಹದ ಯಾವುದೇ ಕೋಶದಲ್ಲಿ ಇವು ಬೆಳೆಯಬಲ್ಲವು.
ಕೋಶದಾನಿಗಳಿಂದ ಕೋಶಗಳನ್ನು ಸ್ವೀಕರಿಸಿ, ಅವುಗಳ ಡಿಎನ್ಎಯನ್ನು ಮಾನವ ತತ್ತಿ ಕೋಶಗಳಿಗೆ ವರ್ಗಾಯಿಸಲಾಗುವುದು. ಅವು ಭ್ರೂಣವಾಗಿ ರೂಪುಗೊಳ್ಳುತ್ತವೆ. ಇದೇ ಕ್ಲೋನ್ಡ್ ಭ್ರೂಣ. ಒಂದೇ ಮಾತಲ್ಲಿ ಹೇಳುವುದಾದರೆ, ಮಾನವ ಕ್ಲೋನಿಂಗ್ನ ಇನ್ನೊಂದು ಮಾದರಿ. ಈಗಾಗಲೇ ಮಾನವ ಕ್ಲೋನಿಂಗ್ ಸಾಕಷ್ಟು ವಿವಾದಕ್ಕೆ ಗ್ರಾಸವಾಗಿದೆ. ಇಂಥಾದರಲ್ಲಿ ವಿಜ್ಞಾನಿಗಳ ಈ ಸೃಷ್ಟಿಕ್ರಿಯೆಗೂ ಪ್ರತಿರೋಧ ಬರುವ ನಿರೀಕ್ಷೆಯಿದೆ. ಆದರೆ, ಈ ಸುದ್ದಿಯ ಬಗ್ಗೆ ಶ್ವೇತಭವನ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications