ಐಟಿ ಕ್ಷೇತ್ರಕ್ಕೆ ಜೀವ ತುಂಬಲಿರುವ ಎಎಸ್‌ಒಸಿಐಒ ಮಹಾಧಿವೇಶನ
ಬೆಂಗಳೂರು : ವಿಶ್ವ ಆರ್ಥಿಕ ಹಿನ್ನಡೆ ಹಾಗೂ ಸೆ.11ರಂದು ಅಮೆರಿಕ ಮೇಲೆ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ನೆಲಕಚ್ಚಿರುವ ಭಾರತದ ಸಾಫ್ಟ್‌ವೇರ್ ಮತ್ತು ಐ.ಟಿ. ಕ್ಷೇತ್ರಕ್ಕೆ ಪುನರ್ಜೀವ ನೀಡಲಿದೆ ಎಂದು ನಿರೀಕ್ಷಿಸಲಾಗಿರುವ ಎಎಸ್‌ಒಸಿಐಒ ಮಹಾಧಿವೇಶನ ಡಿ.6ರಿಂದ ದೆಹಲಿಯಲ್ಲಿ ಆರಂಭವಾಗಲಿದೆ.
ಏಷ್ಯಾ ಸಾಗರೋತ್ತರ ಕಂಪ್ಯೂಟಿಂಗ್ ಕೈಗಾರಿಕೆ (ಎಎಸ್‌ಒಸಿಐಒ) ಕುರಿತ ವಿಚಾರ ಸಂಕಿರಣ ಹಾಗೂ 19ನೇ ಮಹಾಧಿವೇಶನ ಭಾರತದ ಐ.ಟಿ. ಕ್ಷೇತ್ರದಲ್ಲಿ ಹೊಸ ಅವಕಾಶ ಅರಸಲು ಹೊಸ ವೇದಿಕೆ ಕಲ್ಪಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಮೂರು ದಿನಗಳ ಕಾಲ ನಡೆಯುವ ಈ ಮಹಾಧಿವೇಶನ ಅಮೆರಿಕ ಹೊರತುಪಡಿಸಿ, ಉಳಿದ ರಾಷ್ಟ್ರಗಳ ಐ.ಟಿ. ಕ್ಷೇತ್ರದಲ್ಲಿರುವ ಅವಕಾಶ ಪಡೆಯಲು ಸೂಕ್ತ ವೇದಿಕೆ ಕಲ್ಪಿಸಲಿದೆ. ಈ ಅಧಿವೇಶನ ಏಷ್ಯಾದ ಐಟಿ ಕೈಗಾರಿಕೆಗಳ ಸ್ಥಿತಿಗತಿಯ ಚಿತ್ರಣ ಮುಂದಿಡುವುದಲ್ಲದೆ, ಹೊಸ ವ್ಯಾಪಾರ ಸಂಬಂಧಗಳ ವೃದ್ಧಿಗೆ ನೆರವಾಗಲಿದೆ ಎಂದು ನಾಸ್ಕಾಮ್ ವರದಿ ಹೇಳಿದೆ.
ಜಪಾನ್, ಸಿಂಗಪೂರ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಮಲೇಷ್ಯಾ, ತೈವಾನ್, ಇಂಡೋನೇಷ್ಯಾ ಹಾಗೂ ಬಾಂಗ್ಲಾದೇಶದ ನಿಯೋಗಗಳು ಈ ಸಾಗರೋತ್ತರ ಕಂಪ್ಯೂಟಿಂಗ್ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳುತ್ತಿವೆ. ಮಿಗಿಲಾಗಿ ವಿಶೇಷ ಆಹ್ವಾನದ ಮೇರೆಗೆ ಅಮೆರಿಕಾ, ಇಂಗ್ಲೆಂಡ್, ಕೆನಡಾ, ಸ್ಪೇನ್,ಫ್ರಾನ್ಸ್ ರಾಷ್ಟ್ರಗಳು ಕೂಡ ಭಾಗವಹಿಸುತ್ತಿವೆ.
ತನ್ನ 17 ಸದಸ್ಯ ರಾಷ್ಟ್ರಗಳ ನಡುವೆ ವ್ಯಾಪಾರ ಬಲಪಡಿಸಲು ನಾಸ್ಕಾಮ್ ಈ ಮೇಳ ಆಯೋಜಿಸಿದೆ. ಏಷ್ಯಾದ ಮಾರುಕಟ್ಟೆಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಏಷ್ಯಾ ಪ್ರಾಂತ್ಯಕ್ಕೆ ಅನ್ವಯವಾಗುವ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು.
ಜಾಗತಿಕ ಮಾರುಕಟ್ಟೆಯಲ್ಲಿ ಇ-ವಾಣಿಜ್ಯ, ಇ- ಆಡಳಿತಕ್ಕೆ ಇರುವ ಬೇಡಿಕೆ, ಅವಕಾಶಗಳ ಬಗ್ಗೆಯೂ ಅಧಿವೇಶನ ಬೆಳಕು ಚೆಲ್ಲಲಿದೆ ಎಂದು ನಾಸ್ಕಾಮ್ ವರದಿ ಹೇಳಿದೆ. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, ಈ ಮಹಾಧಿವೇಶನ ಉದ್ಘಾಟಿಸಲಿದ್ದು, ವಿಶ್ವದ ಹಲವು ಗಣ್ಯರು, ಕೇಂದ್ರದ ಸಚಿವರು ಪಾಲ್ಗೊಳ್ಳುತ್ತಿದ್ದಾರೆ.
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications