ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳಿಗೆ ಕಡ್ಡಾಯ ಮಿಲಿಟರಿ ಶಿಕ್ಷಣ ಕೊಟ್ಟರೆ ಹೇಗೆ..?ಜಾರ್ಜ್‌ ಚಿಂತನೆ

By Staff
|
Google Oneindia Kannada News

ನವದೆಹಲಿ : ಹದಿನಾರು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಮಿಲಿಟರಿ ಶಿಕ್ಷಣವನ್ನು ಕಡ್ಡಾಯಗೊಳಿಸುವ ಯೋಜನೆ ಕೇಂದ್ರ ಸರಕಾರದ ಮುಂದಿರುವುದಾಗಿ ರಕ್ಷಣಾ ಸಚಿವ ಜಾರ್ಜ್‌ ಫೆರ್ನಾಂಡಿಸ್‌ ತಿಳಿಸಿದ್ದಾರೆ.

ಮಕ್ಕಳು ಎಳೆಯ ವಯಸ್ಸಿನಲ್ಲಿಯೇ ಶಿಸ್ತು ಮತ್ತು ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಲು ಅನುಕೂಲವಾಗುವಂತೆ ಎರಡು ತಿಂಗಳ ಅವಧಿಯ ಮಿಲಿಟರಿ ಶಿಕ್ಷಣವನ್ನು ಕಡ್ಡಾಯಗೊಳಿಸುವ ಬಗ್ಗೆ ಸರಕಾರ ಯೋಚಿಸುತ್ತಿದೆ. ಯವಜನತೆಯ ಒಗ್ಗಟ್ಟಿನಲ್ಲಿ ಎನ್‌ಸಿಸಿಯ ಪಾತ್ರ ಎಂಬ ವಿಷಯ ಕುರಿತು ಶನಿವಾರ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಸಚಿವರು ಈ ವಿಷಯ ತಿಳಿಸಿದರು.

ಮಕ್ಕಳಿಗೆ ಕಡ್ಡಾಯ ಮಿಲಿಟರಿ ಶಿಕ್ಷಣ ನೀಡುವ ಬಗ್ಗೆ ಇನ್ನೂ ಖಚಿತ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೂ ದೇಶದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಶಿಸ್ತಿನ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಫರ್ನಾಂಡಿಸ್‌ ಅಭಿಪ್ರಾಯ ಪಟ್ಟರುಯ. ಭಯೋತ್ಪಾದಕತೆಯನ್ನು ಪ್ರಸ್ತಾಪಿಸಿ ಮಾತನಾಡಿದ ಸಚಿವರು, ನಮ್ಮ ದೇಶದ ಜನರು ಗಾಂಧೀಜಿಯವರ ವಾದದಲ್ಲಿ ನಂಬಿಕೆ ಇಟ್ಟಿರುವುದರಿಂದಲೋ ಏನೋ ಅದೃಷ್ಟವಶಾತ್‌ ಕಾರ್ಗಿಲ್‌ ಯುದ್ಧದ ನಂತರ ಯಾವುದೇ ಅನಾಹುತಗಳು ಸಂಭವಿಸಿಲ್ಲ ಎಂದರು.

ನೀವೇನು ಹೇಳುತ್ತೀರಿ ?

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X