ಶಾಲೆಯಲ್ಲಿ ಹಾವುಗಳ ಸಂಸಾರ: ಹೆದರಿ ಹೌಹಾರಿದ ಹುಡುಗರು
ಮೈಸೂರು : ಮೈಸೂರು ಕಾಲೇಜಿನ ಬಳಿ ಚಿರತೆಯೂ, ಚರಂಡಿಯಲ್ಲಿ ಭಾರೀ ಗಾತ್ರದ ಮೊಸಳೆಯೂ ಪ್ರತ್ಯಕ್ಷವಾಗಿದ್ದು ನಿಮಗೂ ಗೊತ್ತಲ್ಲ. ಈಗ ಮೈಸೂರಿಗೆ ಸಮೀಪದ ತೊರವಳ್ಳಿ ಸರ್ಕಾರಿ ಶಾಲೆಯ ಕೊಟಡಿಯಲ್ಲಿ ನಾಗರಹಾವುಗಳು ಒಂದರ ಹಿಂದೊಂದರಂತೆ ಉದುರಿವೆ.
ಚಾಮರಾಜನಗರ ತಾಲೂಕು ಕುದೇರು ಬಳಿಯ ತೊರವಳ್ಳಿಯ ಸರ್ಕಾರಿ ಶಾಲೆಯಲ್ಲಿ ಗುರುವಾರ ಈ ಘಟನೆ ನಡೆದಿದೆ. ತರಗತಿ ನಡೆಯುತ್ತಿದ್ದಾಗ ಛಾವಣಿಯಿಂದ ಒಂದಲ್ಲ, ಎರಡಲ್ಲ, ಮೂರು ನಾಗರ ಹಾವುಗಳು ಬಿದ್ದಾಗ, ಹೆದರಿ ಹೌಹಾರಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಚೀರುತ್ತಾ, ಕಿರುಚುತ್ತಾ ಕ್ಲಾಸ್ ರೂಂನಿಂದ ಹೊರಗೆ ಓಡಿ ಬಂದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪುಣ್ಯಕ್ಕೆ ಹಾವುಗಳು ಮಕ್ಕಳಿಂದ ಸ್ವಲ್ಪ ದೂರದಲ್ಲಿ ಬಿದ್ದ ಕಾರಣ, ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ, ಮಕ್ಕಳ ಶಾಲೆಯ ಕೊಠಡಿಯಲ್ಲಿ ಕಾಲಿಡಲೂ ಹೆದರುತ್ತಿದ್ದಾರೆ. ಪೋಷಕರಂತೂ ಮಕ್ಕಳನ್ನು ಶಾಲೆಗೆ ಕಳುಹಿಸುವುದೋ ಬೇಡವೋ ಎಂಬ ಆತಂಕಕ್ಕೆ ಒಳಗಾಗಿದ್ದಾರೆ. ಮೇಲ್ಛಾವಣಿಯಲ್ಲಿ ವಾಸ ಮಾಡುತ್ತಿದ್ದ ಈ ಹಾವುಗಳು ಜಗಳವಾಡಿಕೊಂಡು ಕೆಳಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಅಂದಹಾಗೆ ಹಾವುಗಳು ಬಂದ ಸಮಯದಲ್ಲಿ ಮೇಸ್ಟ್ರು ‘ನಾಗರಹಾವೆ ಹಾವೊಳು ಹೂವೆ, ಬಾಗಿಲ ಬಿಲದಲಿ ನಿನ್ನಯ ಠಾವೆ.... ’ ಪದ್ಯದ ಪಾಠ ಮಾಡುತ್ತಿರಲಿಲ್ಲವಂತೆ.
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications