ಮನಸ್ಸು ಬದಲಿಸಿದ ಮೈಕ್ ಡಿನ್ನೆಸ್ ; ಸಚಿನ್ ಆರೋಪ ಮುಕ್ತ
ಪೋರ್ಟ್ ಎಲಿಜಬೆತ್ : ಸ್ಟಾರ್ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಚೆಂಡು ವಿರೂಪಗೊಳಿಸಿದ ಆರೋಪದಿಂದ ಮುಕ್ತರಾಗಿದ್ದಾರೆ.
ಮ್ಯಾಚ್ ರೆಫರಿ ಮೈಕ್ ಡಿನ್ನೆಸ್ ಅವರು ಸಚಿನ್ ಮೇಲಿನ ಈ ಆರೋಪ ಹುರುಳಿಲ್ಲದ್ದು ಎಂದಿದ್ದಾರೆ. ಚೆಂಡಿನ ಮೇಲ್ಮೈಯನ್ನು ಹೊಳಪುಗೊಳಿಸಲು ಉಜ್ಜುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಹೇಳುವುದರೊಂದಿಗೆ ಸಚಿನ್ ತೆಂಡೂಲ್ಕರ್ ಮೇಲಿನ ಆರೋಪ ನಿವಾರಣೆಯಾಗಿದೆ.
ದಕ್ಷಿಣ ಆಫ್ರಿಕಾದ ಪೋರ್ಟ್ ಎಲಿಜಬೆತ್‌ನಲ್ಲಿ ನಡೆಯುತ್ತಿರುವ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ವೇಳೆ ತೆಂಡೂಲ್ಕರ್ ಚೆಂಡು ವಿರೂಪಗೊಳಿಸುವ ಪ್ರಯತ್ನ ನಡೆಸಿದರು ಎಂದು ಆಪಾದಿಸಿ ಪಂದ್ಯದ ಆಯೋಜಕರು ಟೆಲಿವಿಷನ್ ಸಾಕ್ಷ್ಯ ಒದಗಿಸಿದ್ದರು. ಈ ಆಪಾದನೆ ನಿಜ ಎಂದು ಹೇಳಿದ್ದ ಮ್ಯಾಚ್ ರೆಫರಿ ಮೈಕ್ ಡೆನ್ನಿಸ್ ಇದೀಗ ತಮ್ಮ ಇರಾದೆ ಬದಲಾಯಿಸಿದ್ದಾರೆ. ಸಚಿನ್ ಅವರನ್ನು ಆರೋಪ ಮುಕ್ತಗೊಳಿಸಿದ್ದಾರೆ.
(ಪಿಟಿಐ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications