ಎಂ.ಫಿಲ್‌ಗೆ ಮುಂಬೈ ವಿವಿ ಕನ್ನಡ ವಿಭಾಗದಿಂದ ಅರ್ಜಿ ಆಹ್ವಾನ
ಮುಂಬಯಿ : 2001-2002 ನೇ ಇಸವಿಯ ಎಂ.ಫಿಲ್ ಪದವಿಗಾಗಿ ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗ ಅರ್ಜಿಗಳನ್ನು ಆಹ್ವಾನಿಸಿದೆ.
ಎಂ.ಫಿಲ್‌ಗಾಗಿ ಅರ್ಜಿ ಸಲ್ಲಿಸಲು ಡಿಸೆಂಬರ್ 3 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ- ಮುಖ್ಯಸ್ಥರು, ಕನ್ನಡ ವಿಭಾಗ, ಮುಂಬಯಿ ವಿಶ್ವ ವಿದ್ಯಾಲಯ, ವಿದ್ಯಾನಗರ, ಮುಂಬಯಿ. ವಿಳಾಸವನ್ನು ಸಂಪರ್ಕಿಸಬಹುದು. ಅಂಚೆ ಮುಖಾಂತರ ಅರ್ಜಿ ಪಡೆಯಲು ಬಯಸುವವರು 50 ರುಪಾಯಿ ಎಂಓ ಅಥವಾ ಡಿ.ಡಿ. ಕಳುಹಿಸಬಹುದು. ಡಿ.ಡಿ.ಯಾಂದಿಗೆ 8 ರುಪಾಯಿಗಳ ಅಂಚೆ ಚೀಟಿ ಲಗತ್ತಿಸಿದ ಸ್ವ ವಿಳಾಸದ ಲಕೋಟೆ ಇರಿಸುವುದನ್ನು ಮರೆಯಬಾರದು.
ಮೂವರಿಗೆ ಎಂ.ಫಿಲ್ ಪದವಿ
ಕನ್ನಡ ವಿಭಾಗದ ಮೂಲಕ ಎಂ.ಫಿಲ್‌ಗಾಗಿ ಸಲ್ಲಿಸಲಾಗಿದ್ದ ಮೂರು ಪ್ರಬಂಧಗಳನ್ನು ಮುಂಬೈ ವಿಶ್ವ ವಿದ್ಯಾಲಯ ಮಾನ್ಯ ಮಾಡಿದೆ. ಎಂ.ಫಿಲ್ ಪದವಿ ಪಡೆದವರೆಂದರೆ-
- ಸ್ವಾಮಿ ಜಿ.ಎಸ್. ಅವರ ದೇಶಿಕೇಂದ್ರ ಸಂಗನ ಬಸವಯ್ಯನ ವಚನಗಳು ಒಂದು ಅಧ್ಯಯನ( ಮಾರ್ಗದರ್ಶನ- ಡಾ.ಜಿ.ಎನ್.ಉಪಾಧ್ಯ).
- ಪ್ರಭು ಅಂಗಡಿ ಅವರು ಬರೆದ ನೀನಾಸಂ ಒಂದು ಅಧ್ಯಯನ (ಮಾರ್ಗದರ್ಶನ- ಡಾ।ಕೆ.ರಘುನಾಥ).
- ವಿಜಯಾನಂದ ವಗ್ಗೆ ಅವರು ಬರೆದ ದೇವನೂರು ಮಹಾದೇವ ಅವರ ಕಥೆಗಳು ಒಂದು ಅಧ್ಯಯನ (ಮಾರ್ಗದರ್ಶನ- ಡಾ।ಕೆ.ರಘುನಾಥ).
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications