Get Updates
Get notified of breaking news, exclusive insights, and must-see stories!

341 ಓಟು ಪಡೆದು ಗೆಲುವಿನಿಂದ ಎಸ್ಕೇಪಾದ ಎಸ್ಕೇಪ್‌ ನಾಗಪ್ಪ

ಬೆಂಗಳೂರು : ಗುರುವಾರ ಬೆಂಗಳೂರು ಮಹಾನಗರ ಪಾಲಿಕೆಯ ಗಾಯತ್ರಿನಗರ ಹಾಗೂ ಅರಮನೆ ನಗರ ವಾರ್ಡ್‌ಗಳಿಗೆ ನಡೆದ ಮರುಮತದಾನದ ಫಲಿತಾಂಶ ಹೊರಬಿದ್ದಿದ್ದು- ಕಾಂಗ್ರೆಸ್‌ ಹಾಗೂ ಸಂಯುಕ್ತ ಜನತಾದಳ ತಲಾ ಒಂದೊಂದು ಸ್ಥಾನ ಹಂಚಿಕೊಂಡಿವೆ.

ಅರಮನೆ ನಗರ ವಾರ್ಡ್‌ನಲ್ಲಿ ಸಂಯುಕ್ತ ಜನತಾದಳದ ಅಭ್ಯರ್ಥಿ ರಾಜೇಂದ್ರರಾವ್‌ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಶಕೀಲ್‌ ಅಹ್ಮದ್‌ ಅವರನ್ನು 1800 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಗಾಯತ್ರಿನಗರ ವಾರ್ಡ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸಿ.ಎಂ. ನಾಗರಾಜ್‌ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಸಿ.ಆರ್‌.ಸ್ವಾಮಿ ಅವರನ್ನು 1 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.

ಎಸ್ಕೇಪ್‌ ನಾಗಪ್ಪನಿಗೆ ದಾರುಣ ಸೋಲು

ರಾಜ್‌ ಅಪಹರಣ ಪ್ರಕರಣದಲ್ಲಿ ವೀರಪ್ಪನ್‌ಗೆ ಚಳ್ಳೆಹಣ್ಣು ತಿನ್ನಿಸಿ ಓಡಿಬಂದಿದ್ದ ಎಸ್ಕೇಪ್‌ ನಾಗಪ್ಪ ಗಾಯತ್ರಿನಗರ ವಾರ್ಡ್‌ ಚುನಾವಣೆಯಲ್ಲಿ ದಾರುಣ ಸೋಲನುಭವಿಸಿದ್ದಾರೆ. ಎಸ್ಕೇಪ್‌ ಸಾಹಸವನ್ನೇ ಬಂಡವಾಳವಾಗಿಸಿಕೊಂಡು ವಿವಿಧ ಕನ್ನಡ ಸಂಘಟನೆಗಳ ಬೆಂಬಲದೊಂದಿಗೆ ಚುನಾವಣೆ ಆಖಾಡಕ್ಕಿಳಿದಿದ್ದ ನಾಗಪ್ಪ ಪಡೆದಿರುವುದು ಕೇವಲ 314 ಓಟು ಮಾತ್ರ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+