Get Updates
Get notified of breaking news, exclusive insights, and must-see stories!

ಕರ್ನಾಟಕದ ಮೊದಲ ಸೈಬರ್‌ ಆಪಾದಿತ ಯಾರು ಗೊತ್ತೆ?

ಬೆಂಗಳೂರು : ನಗರ ಪೊಲೀಸರು ರಾಜ್ಯದ ಮೊದಲ ಸೈಬರ್‌ ಆರೋಪಿಯನ್ನು ಬಂಧಿಸಿದ್ದಾರೆ. ಫೀನಿಕ್ಸ್‌ ಗ್ಲೋಬಲ್‌ ಸಲ್ಯೂಷನ್ಸ್‌ (ಇಂಡಿಯಾ) ಕಂಪನಿಯ ಕೆ.ಆರ್‌.ವಿಜಯ ಕುಮಾರ್‌ ಎಂಬಾತನೇ ಈ ಭಾಗ್ಯವಂತ!

ನವೆಂಬರ್‌ 12ರಂದು ಸೈಬರ್‌ ಠಾಣೆಯಲ್ಲಿ ದಾಖಲಾದ ದೂರಿನ ಬೆನ್ನು ಹತ್ತಿದ ಪೊಲೀಸರು ಆರೋಪಿ ವಿಜಯ ಕುಮಾರ್‌ನನ್ನು ಬಂಧಿಸಿದರು. ಇಲೆಕ್ಟ್ರಾನಿಕ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿರುವ ಈತ ತಾನು ಕೆಲಸ ಮಾಡುವ ಕಂಪನಿಯ ಅಮೆರಿಕೆಯಲ್ಲಿರುವ ಪ್ರಧಾನ ಕಚೇರಿಗೆ ಬೆದರಿಕೆ ಇ-ಮೇಲ್‌ಗಳನ್ನು ಕಳಿಸುತ್ತಿದ್ದ. ಭಾರತದಲ್ಲಿರುವ ಶಾಖೆಗಳನ್ನು ಮುಚ್ಚಿ. ಇಲ್ಲವಾದರೆ ಪರಿಣಾಮ ನೆಟ್ಟಗಾಗದು ಎಂಬ ಬೆದರಿಕೆ ಇ-ಮೇಲ್‌ಗಳನ್ನು ಈತ ಅಮೆರಿಕೆಗೆ ಕಳಿಸುತ್ತಿದ್ದ.

ಮೊದಲು ಇ-ಮೇಲ್‌ಗಳನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಒಂದು ಇ-ಮೇಲ್‌ ಸರ್ವರ್‌ ಕೆಲಸವನ್ನು ಸ್ಥಗಿತಗೊಳಿಸಿತು. ಸರ್ವರ್‌ ಸರಿಪಡಿಸಿದ ನಂತರ ಮತ್ತೊಂದು ಇ-ಮೇಲ್‌ ಬಂತು. ಸರ್ವರ್‌ ಹಾಳಾಗಲು ನಾನೇ ಕಾರಣ. ಇನ್ನಾದರೂ ನನ್ನ ಸಾಮರ್ಥ್ಯ ತಿಳಿಯಿರಿ ಎಂಬ ಸಂದೇಶ ಅದರಲ್ಲಿತ್ತು. ಇದು ಹುಡುಗಾಟಿಕೆಯಲ್ಲ. ಗಂಭೀರ ಸ್ವರೂಪದ ಪುಂಡಾಟಿಕೆ ಎಂದು ಅರಿತ ಕಂಪನಿ ಸೈಬರ್‌ ಠಾಣೆಗೆ ದೂರಿತ್ತಿತು. ತನಿಖೆ ನಂತರ ಆ ವ್ಯಕ್ತಿ ವಿಜಯ ಕುಮಾರ್‌ ಎಂದು ಪೊಲೀಸರಿಗೆ ಗುಮಾನಿ ಬಂತು. ವಿಜಯ ಕುಮಾರ್‌ ಇದೀಗ ನ್ಯಾಯಾಂಗದ ವಶದಲ್ಲಿದ್ದಾನೆ.

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+