‘ಒಸಾಮನ ಬಳಿ ಪಾಕಿಸ್ತಾನದ ವಿಕಿರಣಶೀಲ ಬಾಂಬ್‌ಗಳಿವೆ,ಎಚ್ಚರ!’
ಇಸ್ಲಾಮಾಬಾದ್ : ತನ್ನ ಬಳಿ ಅಣ್ವಸ್ತ್ರ ಹಾಗೂ ರಾಸಾಯನಿಕ ಅಸ್ತ್ರಗಳಿವೆ ಎಂದು ಲ್ಯಾಡೆನ್ ಹೇಳಿಕೊಂಡ ಎರಡೇ ದಿನಗಳಲ್ಲಿ ಅದಕ್ಕೆ ಪುಷ್ಟಿ ದೊರೆತಿದೆ. ತಾವು ಲ್ಯಾಡೆನ್‌ನನ್ನು ಎರಡು ಬಾರಿ ಭೇಟಿಯಾಗಿರುವುದಾಗಿ ಕಳೆದ ತಿಂಗಳು ವಿಚಾರಣೆಗೊಳಗಾಗಿದ್ದ ಪಾಕಿಸ್ತಾನದ ವಿಜ್ಞಾನಿ ಬಷಿರುದ್ದೀನ್ ಮಹ್ಮೂದ್ ಒಪ್ಪಿಕೊಂಡಿದ್ದಾರೆ.
ನಾನು ಲ್ಯಾಡೆನ್‌ನನ್ನು ಭೇಟಿಯಾಗಿದ್ದುದು ನಿಜ. ಅದು ಆಫ್ಘನ್ ಪ್ರವಾಸ ಕೈಗೊಂಡಿದ್ದಾಗ. ಸೆಪ್ಟೆಂಬರ್ 11ರ ಅಮೆರಿಕಾ ದಾಳಿಗೆ ಮುನ್ನ ಎಂದು ಮಹ್ಮೂದ್ ಬೇಹುಗಾರಿಕಾ ದಳಗಳಿಗೆ ಹೇಳಿದ್ದಾರೆ. ಒಸಾಮ ಹಾಗೂ ಆತನ ಜಾಲ ಅಲ್-ಕ್ವೆದಾ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂಬ ಗುಮಾನಿ ಕಾರಣ ಮಹ್ಮೂದ್ ಜೊತೆಗೆ ಇನ್ನೂ ಇಬ್ಬರು ಪಾಕಿಸ್ತಾನಿ ವಿಜ್ಞಾನಿಗಳನ್ನು ವಿಚಾರಣೆಗೆ ಒಳಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಒಸಾಮ ಹಾಗೂ ಆತನ ಸಂಘಟನೆ ಅಲ್-ಕ್ವೆದಾ ವಿಕಿರಣಶೀಲ ಬಾಂಬ್‌ಗಳನ್ನು ಹೊಂದಿರುವ ಅಪಾಯವಿದೆ ಎಂದು ಅಂತರರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ (ಐಎಇಎ) ಎಚ್ಚರಿಸಿದೆ. ಈ ಬಾಂಬ್‌ಗಳು ಅಣು ಬಾಂಬ್‌ಗಿಂತ ತೀವ್ರವಾದವು. ಇವುಗಳನ್ನು ಸಿದ್ಧಪಡಿಸುವುದೂ ಸುಲಭ. ಗಾತ್ರದಲ್ಲೂ ಅತಿ ಚಿಕ್ಕದಾಗಿದ್ದು, ಶೇಖರಿಸಿಡುವುದು ಸುಲಭ. ಪಾಶ್ಚಿಮಾತ್ಯ ಪತ್ರಿಕೆಯಾಂದು ವರದಿ ಮಾಡಿರುವಂತೆ ಈ ಬಾಂಬ್‌ಗಳನ್ನು ಪಾಕಿಸ್ತಾನದಲ್ಲಿ ತಯಾರಿಸಲಾಗಿದೆ.
ಚಿಕ್ಕ ಗಾತ್ರದ ಬಾಂಬ್ ತಯಾರಿ ಶುರುಮಾಡಿದ್ದು ರಷ್ಯಾ. ಈ ತಂತ್ರಜ್ಞಾನವನ್ನು ಪಾಕಿಸ್ತಾನ ಕೂಡ ಅಳವಡಿಸಿಕೊಂಡಿದೆ. ಪಾಕಿಸ್ತಾನ ತಯಾರಿಸುವ ಬಾಂಬ್‌ಗಳ ತೀವ್ರತೆ, ಹಿರೋಷಿಮಾ ಮೇಲೆ ಅಮೆರಿಕಾ ಬಿಸುಟ ಬಾಂಬ್‌ಗಿಂತ ಹೆಚ್ಚಾಗಿರುವುದಿಲ್ಲ. ಆದರೆ ವಿಕಿರಣ ಸೂಸುವ ಬಾಂಬ್‌ಗಳ ದುಷ್ಪರಿಣಾಮದ ಅವಧಿ ಅನಂತ. ಒಸಾಮನ ಬಳಿ ಇರುವ ಬಾಂಬ್‌ಗಳು ರಷ್ಯಾದಿಂದ ರವಾನೆಯಾಗಿರುವುದಲ್ಲ, ಅವು ಪಾಕಿಸ್ತಾನದಿಂದ ತಲುಪಿವೆ. ಒಸಾಮ-ಪಾಕಿಸ್ತಾನದ ವಿಜ್ಞಾನಿಗಳ ಸಂಪರ್ಕ ಇದರಿಂದ ದೃಢವಾಗುತ್ತದೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
(ಪಿಟಿಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications