ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನ್‌ ವಿರೋಧಿ ಮೈತ್ರಿಕೂಟದ ಮುನ್ನಡೆ, ಹೆರಾತ್‌ ಕೈವಶ

By Staff
|
Google Oneindia Kannada News

ಟೆಹರಾನ್‌ : ಆಪ್ಘನಿಸ್ತಾನದ ಆಡಳಿತಾರೂಢ ತಾಲಿಬಾನ್‌ ಆಡಳಿತ ಸೋಮವಾರ ಭಾರೀ ಹಿನ್ನಡೆ ಅನುಭವಿಸಿದ್ದು , ತಾಲಿಬಾನ್‌ ವಶದಲ್ಲಿದ್ದ ಪ್ರಮುಖ ಪಟ್ಟಣ ಹೆರಾತ್‌ ತಾಲಿಬಾನ್‌ ವಿರೋಧಿ ಮೈತ್ರಿಕೂಟದ ವಶವಾಗಿದೆ. ಹೆರಾತ್‌ ಪಟ್ಟಣವನ್ನು ಸೋಮವಾರ ಬೆಳಗ್ಗೆ ತಾಲಿಬಾನ್‌ ವಿರೋಧಿ ಮೈತ್ರಿಕೂಟ ವಶಪಡಿಸಿಕೊಂಡಿರುವುದಾಗಿ ಇರಾನಿಯನ್‌ ರೇಡಿಯಾ ವರದಿ ಮಾಡಿದೆ.

ಭಾರೀ ಸಂಖ್ಯೆಯ ತಾಲಿಬಾನ್‌ ಸೈನಿಕರು ಈ ಕದನದಲ್ಲಿ ಹತರಾಗಿದ್ದಾರೆ ಹಾಗೂ ಮೈತ್ರಿಕೂಟಕ್ಕೆ ಸೆರೆ ಸಿಕ್ಕಿದ್ದಾರೆ ಎಂದು ಸ್ಥಳೀಯ ಪ್ರತಿನಿಧಿಯ ವರದಿಯನ್ನುಲ್ಲೇಖಿಸಿ ಇರಾನಿಯನ್‌ ರೇಡಿಯಾ ಪ್ರಕಟಿಸಿದೆ.

ಇರಾನ್‌ ಗಡಿಗೆ 150 ಕಿಮೀ ದೂರದಲ್ಲಿರುವ ಹೆರಾತ್‌ ತಾಲಿಬಾನ್‌ ಆಡಳಿತದ ವಶದಲ್ಲಿದ್ದ ಪ್ರಮುಖ ಪಟ್ಟಣಗಳಲ್ಲೊಂದಾಗಿದೆ. ಉಳಿದ ಪ್ರಮುಖ ಪಟ್ಟಣಗಳಾದ ಕಾಂದಹಾರ್‌ ಹಾಗೂ ಕಾಬೂಲ್‌ ಇನ್ನೂ ತಾಲಿಬಾನ್‌ ಆಡಳಿತದ ಸುಪರ್ದಿನಲ್ಲಿದ್ದು, ಶೀಘ್ರದಲ್ಲಿಯೇ ಕಾಬೂಲ್‌ ವಶಪಡಿಸಿಕೊಳ್ಳುವುದಾಗಿ ಮೈತ್ರಿಕೂಟ ತಿಳಿಸಿದೆ.

ತಾಲಿಬಾನ್‌ ಮುಷ್ಠಿಯಿಂದ ಬಿಡುಗಡೆಗೊಂಡ ಹೆರಾತ್‌ನಲ್ಲಿ ಭಾರೀ ವಿಜಯೋತ್ಸವದ ಸಂಭ್ರಮ ಕಾಣಿಸುತ್ತಿದೆ. ಜನರು ಮನೆಗಳ ಮೇಲೆ ಹತ್ತಿ ಸಂಭ್ರಮ ಆಚರಿಸುತ್ತಿದ್ದಾರೆ. ಕಾರುಗಳ ಚಾಲಕರು ರಸ್ತೆಯಲ್ಲಿ ಹಾರ್ನ್‌ ಮಾಡುತ್ತಿದ್ದಾರೆ. ಸಂಭವನೀಯ ದೊಂಬಿಯ ಹಿನ್ನೆಲೆಯಲ್ಲಿ ಅಂಗಡಿಗಳನ್ನು ಮುಚ್ಚಿ, ಮಾಲಿಕರು ಮನೆಗೆ ತೆರಳಿದ್ದಾರೆ ಎಂದು ಟೆಲಿವಿಷನ್‌ ಪ್ರತಿನಿಧಿಯಾಬ್ಬರು ತಿಳಿಸಿದ್ದಾರೆ.

(ಪಿಟಿಐ)

ಮುಖಪುಟ / ‘ಆಪರೇಷನ್‌ ಎಂಡ್ಯೂರಿಂಗ್‌ ಫ್ರೀಡಂ’

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X