ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ

By Staff
|
Google Oneindia Kannada News

ಬೆಳಗಾವಿ : ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ’ದಕ್ಷಿಣ ಭಾರತಕ್ಕೆ ಜೈನ ಧರ್ಮದ ಕೊಡುಗೆ’ ಎಂಬ ಡಾ. ಬಿ.ಕೆ. ಖಡಬಡಿ ಅವರ ಕೃತಿಯನ್ನು ಬನಾರಸ್‌ ಹಿಂದೂ ವಿಶ್ವ ವಿದ್ಯಾಲಯದ ನಿವೃತ್ತ ಡೀನ್‌ ಡಾ. ಆರ್‌. ಜೆ ಗಲಗಲಿ ಅವರು ಭಾನುವಾರ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಗಲಗಲಿ ಅವರು ಜಿಲ್ಲಾ ಸಾಹಿತ್ಯ ಪರಿಷತ್‌ನ ಈ ವರ್ಷದ ಕಾರ್ಯಕ್ರಮಗಳನ್ನೂ ಉದ್ಘಾಟಿಸಿ, ಪರಿಷತ್ತಿಗಾಗಿ 15 ಸಾವಿರ ರೂಪಾಯಿಯನ್ನು ದೇಣಿಗೆಯನ್ನಾಗಿ ನೀಡಿದರು. ಕರ್ನಾಟಕ ವಿಶ್ವ ವಿದ್ಯಾಲಯದ ನಿವೃತ್ತ ಪ್ರೊಫೆಸರ್‌ ಖಡಬಡಿ ಅವರ ಜೈನ ಮತದ ಬಗೆಗಿನ ಪುಸ್ತಕ ಪ್ರಕಾಶನಕ್ಕೆ ಸಹಕರಿಸಿದ ಜಿ.ಡಿ. ಜಿನಗೌಡ ಮತ್ತು ನಾಗನೂರು ರುದ್ರಾ ಮಠದ ಸಿದ್ಧರಾಮ ಸ್ವಾಮೀಜಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಭಾಗವಹಿಸಿದ್ದ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ, ಡಾ. ಎಂ. ಎಸ್‌. ಹರದಗಟ್ಟಿ ಅವರು, ಸಾಹಿತ್ಯ ಪರಿಷತ್ತಿನ ಘಟಕಗಳಿಗಾಗಿ ಕಚೇರಿ ನಿರ್ಮಾಣಕ್ಕೆ ಮತ್ತು ಜಿಲ್ಲಾ ಕೇಂದ್ರ ಕಟ್ಟಡಕ್ಕಾಗಿ ಸೂಕ್ತ ಸ್ಥಳವನ್ನು ಆರಿಸಲಾಗಿದೆ . ಅಲ್ಲದೆ ಜಿಲ್ಲಾ ಘಟಕವು ತ್ರೆೃಮಾಸಿಕ ಪತ್ರಿಕೆಯಾಂದನ್ನು ಹೊರ ತರುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಹೇಳಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X