ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಭಕ್ತಿ ಬಿತ್ತುವ ಕನಸಿನೊಂದಿಗೆ ಎಪಿಜೆ ಕಲಮ್‌ ಬೆಂಗಳೂರಿಗೆ!

By Staff
|
Google Oneindia Kannada News

ಬೆಂಗಳೂರು : ಹಿರಿಯ ವಿಜ್ಞಾನಿ ಹಾಗೂ ಭಾರತ ರತ್ನ ಪ್ರಶಸ್ತಿ ವಿಜೇತ ಡಾ. ಎಪಿಜೆ ಅಬುಲ್‌ ಕಲಮ್‌ ಅವರ ದೆಹಲಿ ವಾಸ ಮುಗಿದಂತಿದೆ. ಭಾರತ ಸರಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ಅವರದು ಸೋಮವಾರ ಕೊನೆಯ ದಿನ. ಮುಂದೇನು ಅಂತ ಕೇಳಿದರೆ, ಕಲಮ್‌ ಏನಂತಾರೆ ಗೊತ್ತಾ- ನೇರ ಬೆಂಗಳೂರಿಗೆ ಹೋಗುತ್ತೇನೆ. ಇನ್ನು ಮೇಲೆ ಅಲ್ಲೇ ನನ್ನ ಮನೆ. ಬೆಂಗಳೂರಿನ ಬಗೆಗೆ ಅದೆಷ್ಟೋ ಸಿಹಿ ನೆನಪುಗಳು ಎದೆಯಲ್ಲಿವೆ ಗೊತ್ತಾ ...

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸಾಯನ್ಸ್‌ನ ವಿಶೇಷ ಪ್ರೊಫೆಸರ್‌ ಆಗಿ ಕೆಲಸ ಮಾಡುವುದೂ ನನಗೆ ಖುಷಿಯ ವಿಷಯ. ಇನ್ನೊಂದು ಮುಖ್ಯ ವಿಷಯವೆಂದರೆ ಅಲ್ಲಿನ ಡಾ. ಬ್ರಹ್ಮ ಪ್ರಕಾಶ್‌ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಪೀಠದ ಮುಖ್ಯಸ್ಥನಾಗುವುದು. ‘ಬ್ರಹ್ಮ ಪ್ರಕಾಶರೇ ನನ್ನ ಗುರುಗಳು ! ’ ಎಂದು ಟೆಲಿಫೋನ್‌ ಸಂದರ್ಶನವೊಂದರಲ್ಲಿ ಅಬುಲ್‌ ಕಲಮ್‌ ಭಾವುಕರಾಗಿ ಹೇಳಿದ್ದಾರೆ.

‘ಬದುಕಿನ ಇನ್ನುಳಿದ ಸಮಯವನ್ನು ಭಾರತೀಯ ಯುವಜನತೆಗಾಗಿ ವ್ಯಯಿಸುತ್ತೇನೆ. ಅವರಲ್ಲಿ ದೇಶದ ಬಗ್ಗೆ ಪ್ರೇಮ, ದೇಶಭಕ್ತಿ ಬೆಳೆಯಬೇಕು. ಮಾರ್ಗದರ್ಶನ ನೀಡಬೇಕು. ಅವರ ಕನಸುಗಳು ಭಗ್ನವಾಗಬಾರದು’ ಎನ್ನುವ ಕಲಮ್‌ ಅವರು, 1957ರಲ್ಲಿ ಬೆಂಗಳೂರಿನ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌ನಿಂದ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು.

ಬಾಹ್ಯಾಕಾಶ, ಕ್ಷಿಪಣಿ ತಂತ್ರಜ್ಞಾನ, ಪರಮಾಣು ವಿಜ್ಞಾನ ಮತ್ತು ಯುದ್ಧ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದಂತೆ ತಮ್ಮ ಅನುಭವಗಳನ್ನು ಯುವಜನತೆಯಾಂದಿಗೆ ಹಂಚಿಕೊಳ್ಳಲು ಅವರು ಇಷ್ಟಪಡುತ್ತಾರೆ. ಇದರಿಂದ ಭಾರತ ಸಶಕ್ತ ದೇಶ ಎಂಬುದನ್ನು ಯುವಜನತೆಗೂ ಮನವರಿಕೆಯಾಗುತ್ತದೆ ಎಂಬುದು ಕಲಮ್‌ ನಂಬಿಕೆ.

ಸರತಿ ಸಾಲಿನಲ್ಲೇ ಟಿಕೇಟು ಕೊಳ್ಳುವ ಭಾರತ ರತ್ನ

ಯಾವ ಕಾರ್ಯಕ್ರಮವೇ ಆಗಲೀ, ಭಾಷಣ ಮುಗಿಸಿಕೊಂಡು ಬರುವಾಗ ಕೈತುಂಬ ಹಣ್ಣು ಹೂಮಾಲೆಗಳನ್ನು ಹಿಡಿದುಕೊಂಡು ಬರುವ ಈ ವಿಜ್ಞಾನಿ ಅವನ್ನೆಲ್ಲ ಕಾರ್‌ ಡ್ರೆೃವರಿಗೆ ಕೊಟ್ಟು ಬಿಡುತ್ತಿದ್ದರು. ತಮಗೆ ಭಾರತ ರತ್ನ ಘೋಷಣೆಯಾದಾಗ ಕಲಮ್‌ ತನಗೆ ಹೂಮಾಲೆಗಳನ್ನು ಅರ್ಪಿಸಬಾರದು ಅಂತ ಒಂದು ಸರ್ಕ್ಯುಲರನ್ನೇ ಹೊರಡಿಸಿದ್ದರು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿಯೇ ನಿಂತು ಟಿಕೇಟು ಕೊಳ್ಳುತ್ತಿದ್ದರು.

ದೇಶದ ಯುವಜನತೆಯ ಬಗ್ಗೆ ಅಪಾರ ಭರವಸೆಯನ್ನು ಇಟ್ಟುಕೊಂಡಿರುವ ಈ ವಿಜ್ಞಾನಿ- ನಮ್ಮ ದೇಶದ ಹಿರಿಮೆಯನ್ನು ತಿಳಿ ಹೇಳುವ ಕನಸು ಹೊತ್ತು ಬೆಂಗಳೂರಿಗೆ ಬರುಲಿದ್ದಾರೆ. ಕಲಮ್‌ ಹಿಂದೊಮ್ಮೆ ಹೇಳಿದ್ದರು : Dream, dream, dream; dream transfroms into thought. And thoughts result in action.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X