ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಣರಂಗದ ಬಿಸಿಯಿಂದ ಹೃದ್ರೋಗಿಗಳ ಹೃದಯ ಬಡಿತದ ಏರಿಳಿತ

By Staff
|
Google Oneindia Kannada News

ಬೆಂಗಳೂರು : ಅಮೆರಿಕ- ಆಪ್ಘನ್‌ ಯುದ್ಧದ ತುರುಸಿನಲ್ಲಿ ಡಾಲರ್‌ ವಿನಿಮಯ ಬೆಲೆಯಲ್ಲಿ ಉಂಟಾಗುತ್ತಿರುವ ಏರಿಳಿತ ಹೃದಯ ರೋಗಿಗಳ ಹೃದಯ ಬಡಿತದ ಏರಿಳಿತಕ್ಕೂ ಕಾರಣವಾಗಿದೆ. ಜಾಗತಿಕ ವಿತ್ತ ಕ್ಷೇತ್ರದಲ್ಲಿನ ಅಲ್ಲ ಕಲ್ಲೋಲದ ಪರಿಣಾಮ ನಗರದ ಹೃದಯ ಸಂಬಂಧಿ ರೋಗಗಳ ಆಸ್ಪತ್ರೆಗಳಲ್ಲಿ ಕಾಣಿಸಿಕೊಂಡಿದ್ದು , ಹೃದಯ ವಾಲ್ವ್‌ಗಳ ಬೆಲೆ ಹೆಚ್ಚಾಗಿದೆ. ಉಳ್ಳವರೇನೋ ಕೊಟ್ಟಾರು, ಬಡವರು?

ಸಾಮಾನ್ಯವಾಗಿ ಹೃದಯದ ವಾಲ್ವ್‌ ಒಂದರ ಬೆಲೆ 55 ಸಾವಿರ ರುಪಾಯಿ. ಈಗ ಬದಲಾದ ಪರಿಸ್ಥಿತಿಯಲ್ಲಿ ಪ್ರತಿ ವಾಲ್ವ್‌ಗೆ 2 ಸಾವಿರ ರುಪಾಯಿ ಹೆಚ್ಚಾಗಿದೆ. ಹೃದಯದ ವಾಲ್ವ್‌ಗಳನ್ನು ಪೂರೈಸುವ ಕಂಪನಿಗಳು ಅಮೆರಿಕಾಗೆ ಸೇರಿರುವುದೇ ಈ ಸಮಸ್ಯೆಯ ಮೂಲ. ಇದರಿಂದಾಗಿ ಯುದ್ಧಭೂಮಿಯ ಬಿಸಿ ಬೆಂಗಳೂರಿಗೆ ಮುಟ್ಟಿದೆ.

ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ನಾರಾಯಣ ಹೃದಯಾಲಯದ ಡಾ। ದೇವಿ ಪ್ರಸಾದ್‌ ಶೆಟ್ಟಿ ಅವರು ಹೇಳುವಂತೆ ಪ್ರತಿಶತ 90 ರಷ್ಟು ಔಷಧ ಸಾಮಗ್ರಿಗಳನ್ನು ಅಮೆರಿಕ ಮೂಲದ ಕಂಪನಿಗಳೇ ಪೂರೈಸುತ್ತಿವೆ. ಮುಖ್ಯವಾಗಿ ಸೇಂಟ್‌ ಜ್ಯೂಡ್ಸ್‌ ಹೃದಯ ವಾಲ್ವ್‌ಗಳನ್ನು ಒದಗಿಸುತ್ತದೆ. ಆದರೆ, ನಾರಾಯಣ ಹೃದಯಾಲಯ ವಾಲ್ವ್‌ ಕೊರತೆ ಎದುರಿಸುತ್ತಿಲ್ಲ ಎಂದು ದೇವಿಶೆಟ್ಟಿ ಸ್ಪಷ್ಟಪಡಿಸುತ್ತಾರೆ. ತುರ್ತು ಅಗತ್ಯಗಳಿಗಾಗಿ ಆಸ್ಪತ್ರೆಯಲ್ಲಿ ಸದಾ ಹೆಚ್ಚುವರಿ ವಾಲ್ವ್‌ಗಳ ಸ್ಟಾಕ್‌ ಲಭ್ಯ.

ಸೇಂಟ್‌ ಜ್ಯೂಡ್ಸ್‌ನ ಬೆಂಗಳೂರು ವಿತರಕರಾದ ಕಿಶನ್‌ ಮಹೇಶ್ವರಿ ಹೇಳುವುದು ಹೀಗೆ : ಈ ಮುನ್ನ 47 ರುಪಾಯಿಯಿದ್ದ ಡಾಲರ್‌ ವಿನಿಮಯ ದರ ಈಗ 48.50 ರುಪಾಯಿಗೆ ಮುಟ್ಟಿದೆ. ಆ ಕಾರಣದಿಂದಾಗಿಯೇ ವಾಲ್ವ್‌ಗಳ ಬೆಲೆಯೂ ಹೆಚ್ಚಿದೆ.

ಆಪ್ಘಾನಿಸ್ತಾನದ ಮೇಲಿನ ವಾಯುದಾಳಿಯಲ್ಲಿ ಅಮೆರಿಕ ನಿರತವಾಗಿದ್ದರೂ, ವಾಲ್ವ್‌ಗಳ ಸರಬರಾಜಿನಲ್ಲಿ ಯಾವುದೇ ತೊಂದರೆ ಉಂಟಾಗುವ ನಿರೀಕ್ಷೆಯಿಲ್ಲ . ನಮ್ಮ ಬಳಿ ಸಾಕಷ್ಟು ಸ್ಟಾಕ್‌ ಇದೆ. ಆತಂಕಕ್ಕೆ ಕಾರಣವಿಲ್ಲ .

ವಾಲ್ವ್‌ ಬದಲಾಯಿಸುವುದು ಹೇಗೆ?

ಎರಡು ರೀತಿ ಬದಲಾಯಿಸಬಹುದು ಎನ್ನುತ್ತಾರೆ ವೈದ್ಯರು. ಮೊದಲನೆಯದಾಗಿ ಯಾಂತ್ರಿಕ ವಾಲ್ವ್‌ಗಳು; ಮಾರುಕಟ್ಟೆಯಲ್ಲಿ ಇವುಗಳ ಬೆಲೆ 40 ಸಾವಿರದಿಂದ 57 ಸಾವಿರ ರುಪಾಯಿ. ಎರಡನೆಯವು ಜೈವಿಕ ವಾಲ್ವ್‌ಗಳು. ಇವುಗಳನ್ನು ಹೋಮೋಗ್ರಾಫ್ಟ್‌ ಎಂತಲೂ ಕರೆಯುತ್ತಾರೆ. ವ್ಯಕ್ತಿ ಸಾವಿಗೀಡಾದ 24 ಗಂಟೆಗಳೊಳಗಾಗಿ ದೇಹದಿಂದ ವಾಲ್ವ್‌ ಬೇರ್ಪಡಿಸಿ ಬಳಬಹುದು.

ಅಂದಹಾಗೆ, ಹೃದಯ ವಾಲ್ವ್‌ಗಳು ಬಹುಮುಖಿ ಚಟುವಟಿಕೆ ಹೊಂದಿವೆ. ಹಾನಿಗೊಂಡ ವಾಲ್ವ್‌ಗಳಿಂದಾಗಿ ರಕ್ತ ಚಲನೆ ನಿಧಾನವಾಗುತ್ತದೆ, ಸೋರಿಕೆಯೂ ಉಂಟಾಗಬಹುದು ಎನ್ನುತ್ತಾರೆ ವೈದ್ಯರು.

(ಸುದ್ದಿ ಕೃಪೆ: ಎಕ್ಸ್‌ಪ್ಲಾಸಿಟಿ.ಕಾಂ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X