ಬ್ರಿಟೀಷರ ವಿರುದ್ಧ ಮೈಸೂರು ಹುಲಿ ಟಿಪ್ಪು ಕ್ಷಿಪಣಿ ಬಳಸಿದ್ದ !
ತೆನಾಲಿ : ಮೈಸೂರು ಹುಲಿ ಟಿಪ್ಪು ಸುಲ್ತಾನ್ ಶ್ರೀರಂಗಪಟ್ಟಣ ಯುದ್ಧದಲ್ಲಿ ಬ್ರಿಟೀಷರ ವಿರುದ್ಧ ಕ್ಷಿಪಣಿ ಹಾಗೂ ರಾಕೆಟ್‌ಗಳನ್ನು ಬಳಸಿದ್ದ . ಆ ಕ್ಷಿಪಣಿಯ ಮಾದರಿಗಳನ್ನು ಸಂರಕ್ಷಿಸಿ ಇಡಲಾಗಿದೆ ಎನ್ನುವ ವಿಷಯವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಮಹಾ ನಿರ್ದೇಶಕ ಡಾ.ವಿ.ಕೆ.ಆತ್ರೆ ಬಹಿರಂಗ ಪಡಿಸಿದ್ದಾರೆ.
ವಿಜ್ಞಾನ, ತಂತ್ರಜ್ಞಾನ ಮತ್ತು ಯುದ್ಧಭೂಮಿ ಎನ್ನುವ ವಿಷಯದ ಬಗ್ಗೆ ಮಂಗಳವಾರ ಆಂಧ್ರಪ್ರದೇಶದ ತೆನಾಲಿಯಲ್ಲಿ ಆತ್ರೆ ಉಪನ್ಯಾಸ ನೀಡುತ್ತಿದ್ದರು. ಬ್ರಿಟೀಷರ ವಿರುದ್ಧ ಯುದ್ಧದಲ್ಲಿ ಕ್ಷಿಪಣಿ ಬಳಸಿದವರಲ್ಲಿ ಮೈಸೂರಿನ ದೊರೆ ಟಿಪ್ಪು ಸುಲ್ತಾನ್ ಮೊದಲಿಗ ಎಂದು ಕ್ಷಿಪಣಿ ತಂತ್ರಜ್ಞಾನ ಪ್ರಾಚೀನತೆಯನ್ನು ಕುರಿತು ಅವರು ಹೇಳಿದರು.
ಎರಡನೇ ಮಹಾಯುದ್ಧದಲ್ಲಿ ವಿ1 ಹಾಗೂ ವಿ2 ಮಾದರಿಯ ರಾಕೆಟ್‌ಗಳನ್ನು ಬ್ರಿಟೀಷರ ವಿರುದ್ಧ ಜರ್ಮನಿ ಬಳಸಿತ್ತು . ಈಗಿನ ಕ್ಷಿಪಣಿಗಳು ಪ್ರಾಚೀನ ಕ್ಷಿಪಣಿಗಳ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ ಮಾದರಿಗಳಾಗಿವೆ. ನಿಖರ ಗುರಿ ಮುಟ್ಟಬಲ್ಲ ಹಾಗೂ ಮೊಬೈಲ್ ನೆಲೆಗಳಿಂದ ಉಡಾಯಿಸಬಹುದಾದ ಕ್ಷಿಪಣಿಗಳು ದ್ವಿತೀಯ ಮಹಾಯುದ್ಧದ ನಂತರ ಸೇನಾ ವ್ಯೂಹದಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಆತ್ರೆ ಅಭಿಪ್ರಾಯಪಟ್ಟರು.
ಭವಿಷ್ಯದ ರಣರಂಗದಲ್ಲಿ ಮಾನವನ ಬದಲಿಗೆ ರೋಬೋಟ್, ಮಾನವ ರಹಿತ ವಾಹನಗಳು, ಬೌದ್ಧಿಕ ಕೌಶಲ್ಯವೇ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಯುದ್ಧದಲ್ಲಿ ಯಶಸ್ಸಿಗೆ ತಂತ್ರಜ್ಞಾನಕ್ಕಿಂತ ಮಾನವ ವಹಿಸುವ ಪಾತ್ರವೇ ಮುಖ್ಯವಾಗುತ್ತದೆ ಎಂದು ಅವರು ಹೇಳಿದರು.
ಆತ್ರೆ ನೆನಪಿಸಿಕೊಂಡ ಚರಿತ್ರಕಾರ ಟೊಯ್ನ್‌ಬಿ ಹೇಳಿಕೆ-
ಮೊದಲು ಹುಲಿಗಳಿಂದ ಮಾನವ ಆತ್ಮ ರಕ್ಷಣೆ ಮಾಡಿಕೊಳ್ಳಬೇಕಿತ್ತು . ಈಗ ಮಾನವನಿಂದ ಮಾನವ ಆತ್ಮ ರಕ್ಷಣೆ ಮಾಡಿಕೊಳ್ಳಬೇಕಾಗಿದೆ.
(ಪಿಟಿಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications