Get Updates
Get notified of breaking news, exclusive insights, and must-see stories!

ಕುಂದಾಪುರ: ಜುಮ್ಮಾ ಮಸೀದಿ ಜೀರ್ಣೋದ್ಧಾರ ಕಾರ್ಯ ಪೂರ್ಣ

ಕುಂದಾಪುರ: ಇಲ್ಲಿನ ಗುಲ್ವಾಡಿಯಲ್ಲಿ ಮೆಹರಾಜ್‌ ಜುಮ್ಮಾ ಮಸೀದಿಯ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಿದ್ದು , ನವೆಂಬರ್‌ 12ರಂದು ಹೊಸ ಕಟ್ಟಡದ ಉದ್ಘಾಟನೆ ನಡೆಯಲಿದೆ ಎಂದು ಮಸೀದಿಯ ಪ್ರಕಟಣೆ ತಿಳಿಸಿದೆ.

ಸುಮಾರು ಮೂರು ದಶಕಗಳಿಗೂ ಹಿಂದೆ ಸಣ್ಣ ಕಟ್ಟಡವೊಂದರಲ್ಲಿ ಆರಂಭವಾದ ಈ ಮಸೀದಿಯು ಕುಸಿದು ಬೀಳುವ ಮಟ್ಟದಲ್ಲಿದ್ದುದರಿಂದ ಪುನರ್ರಚನೆ ಕಾರ್ಯವನ್ನು ಊರಿನವರ ಸರಕಾರದಿಂದ ಕೈಗೆತ್ತಿಕೊಳ್ಳಲಾಯಿತು. ಗುಲ್ವಾಡಿಯ ಸುಮಾರು 105 ಮನೆಗಳಿಗೆ ಈ ಮಸೀದಿಯ ಅಗತ್ಯವಿದ್ದು , 12 ಲಕ್ಷರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ಮುಗಿದಿದೆ.

ಉದ್ಘಾಟನೆಯ ಪ್ರಯುಕ್ತ ಕಾರ್ಯಕ್ರಮಗಳು ನವೆಂಬರ್‌ ಏಳರಿಂದಲೇ ಆರಂಭವಾಗಲಿವೆ. ಪ್ರತಿದಿನ ಸಂಜೆ 6ರಿಂದ ರಾತ್ರಿ 9ರವರೆಗೆ ಮಸೀದಿಯ ಮೈದಾನದಲ್ಲಿ ಧಾರ್ಮಿಕ ಉಪನ್ಯಾಸವನ್ನು ಆಯೋಜಿಸಲಾಗಿದೆ. 12ರಂದು ಜನಾಬ್‌ ಸೈಯದ್‌ ಕೆ.ಎಸ್‌. ಅಟಕೋಯ ತಂಙಳ್‌ ಕುಂಬೋಳ್‌ ಅವರು ಮಸೀದಿಯನ್ನು ಉದ್ಘಾಟಿಸುತ್ತಾರೆ.

(ಇನ್ಫೋ ವಾರ್ತೆ)

What do you think about this ?

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+