ಬೆಂಗಳೂರು-ಸಿಂಗಪುರ ಮಾರ್ಗದಲ್ಲಿ 3 +2 ವಿಮಾನ ಸಂಚಾರ
ಬೆಂಗಳೂರು : ಇಂಡಿಯನ್ ಏರ್‌ಲೈನ್ಸ್ ಸಂಸ್ಥೆ ನಗರದಿಂದ ಸಿಂಗಪುರಕ್ಕೆ ಎರಡು ಹೊಸ ವಿಮಾನಗಳನ್ನು ಹಾರಾಟಕ್ಕೆ ಬಿಟ್ಟಿದೆ. ಇದರಿಂದಾಗಿ ಬೆಂಗಳೂರು ಹಾಗೂ ಸಿಂಗಪುರ್ ನಡುವೆ ಸಂಚರಿಸುವ ವಿಮಾನಗಳ ಸಂಖ್ಯೆ 3 ರಿಂದ 5 ಕ್ಕೆ ಹೆಚ್ಚಾಗಿದೆ.
ಮಂಗಳವಾರ ಹಾಗೂ ಗುರುವಾರ ಹೊರತುಪಡಿಸಿ ವಾರದ ಉಳಿದೆಲ್ಲ ದಿನಗಳೂ ಬೆಂಗಳೂರು-ಸಿಂಗಪುರ್ ವಿಮಾನ ಸಂಚಾರವಿದೆ. ಬೆಂಗಳೂರಿನಿಂದ ಬೆಳಗ್ಗೆ 5 ಗಂಟೆಗೆ ಪ್ರಯಾಣ ಆರಂಭಿಸುವ ವಿಮಾನ, 7 ಗಂಟೆಗೆ ಸಿಂಗಪುರ್ ತಲುಪಲಿದೆ ಎಂದು ಇಂಡಿಯನ್ ಏರ್‌ಲೈನ್ಸ್ ಪ್ರಕಟಣೆ ತಿಳಿಸಿದೆ.
ಆಯ್ದ ಬೆಂಗಳೂರು-ಸಿಂಗಪುರ ವಿಮಾನಗಳಿಗೆ ಸಂಸ್ಥೆಯು ಲಕ್ಕಿ ಡ್ರಾ ಸೌಲಭ್ಯ ಕಲ್ಪಿಸಿದ್ದು, ಈ ಸ್ಪರ್ಧೆಯ ವಿಜೇತರಿಗೆ ಬೆಂಗಳೂರು-ಸಿಂಗಪುರ್ ಪ್ರಯಾಣಕ್ಕೆ ಉಚಿತ ಟಿಕೆಟ್ ನೀಡಲಾಗುತ್ತದೆ. ಈ ಸೌಲಭ್ಯ ಡಿಸೆಂಬರ್ 15 ರವರೆಗೆ ಲಭ್ಯ.
(ಇನ್ಫೋ ವಾರ್ತೆ)












Click it and Unblock the Notifications